ಗೋಕಾಕ್ ನಲ್ಲಿ ಕಾಲೇಜ್ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸರ್ಕಾರಿ ಬಸ್

ಗೋಕಾಕ್ (Gokak) ನಲ್ಲಿ ಕಾಲೇಜ್ ಬಸ್ ಗೆ (College bus ) ಹಿಂಬದಿಯಿಂದ ಸರ್ಕಾರಿ ಬಸ್ (Government bus) ಡಿಕ್ಕಿಯಾಗಿದೆ. ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ನಡೆದ ಘಟನೆಯಲ್ಲಿ 5 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಥಣಿಯಿಂದ ಶಿವಮೊಗ್ಗಕ್ಕೆ (Shimoga) ತೆರಳುತ್ತಿದ್ದ ಸರ್ಕಾರಿ ಬಸ್ ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ರಸ್ತೆ ಬದಿ ನಿಂತಿದ್ದ ಸ್ಕೂಲ್ ಬಸ್ ಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಕಾಲೇಜು ಬಸ್ಸ್ ನಲ್ಲಿದ್ದ 40 ವಿದ್ಯಾರ್ಥಿಗಳು, ಅದೃಷ್ಠವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ಕಾರಿ ಬಸ್ ನಲ್ಲಿದ್ದ 11 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ
ಗಾಯಾಳುಗಳು ಮೂಡಲಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ : – ಸಿದ್ದರಾಮಯ್ಯ ಹಿಂದೆ ಕಾಂಗ್ರೆಸ್ ಪಕ್ಷ ಸದಾಕಾಲ ಇದೆ ಇರತ್ತೆ – ಎಚ್.ಕೆ.ಪಾಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!