ಹೊಸ ಭರವಸೆ ಹುಟ್ಟಿಸಿದ ಹೊಂದಿಸಿ ಬರೆಯಿರಿ ಟೀಂ

ಸಿನಿಮಾ ಮಾಡೋದೇ ಒಂದು ಸವಾಲು. ಇನ್ನೂ ಸಿನಿಮಾವನ್ನು ಥಿಯೇಟರ್ ಗೆ ತಂದು ನಿಲ್ಲಿಸೋದು ಎಲ್ಲದಕ್ಕಿಂತ ದೊಡ್ಡ ಸವಾಲು. ಅದಕ್ಕಾಗಿ ಚಿತ್ರತಂಡಗಳು ನಾನಾ ಬಗೆಯಲ್ಲಿ ಪ್ರಮೋಷನ್ ಮಾಡ್ತಿವೆ.

ಆದ್ರೆ ಹೊಂದಿಸಿ ಬರೆಯಿರಿ ಸಿನಿಮಾ (Hondisi bareyiri) ಟೀಂ ಸಾಮಾಜಿಕ ಕಳಕಳಿ ಮೆರೆಯುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದೆ.ಪರಿಸರ ದಿನದ ಅಂಗವಾಗಿ ಬಿ ಎನ್ ಎಂಐಟಿ ಕಾಲೇಜ್ ವತಿಯಿಂದ ಇತ್ತೀಚೆಗಷ್ಟೇ ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರವೀಣ್ ತೇಜ್(Praveen tej) , ನವೀನ್ ಶಂಕರ್ (Naveen shankar) , ಐಶಾನಿ ಶೆಟ್ಟಿ (Ishani shetty) , ಸಂಯುಕ್ತ ಹೊರನಾಡು (Samyuktha hornad) , ಭಾವನಾ ರಾವ್ (Bhavana raj) , ಅರ್ಚನಾ ಜೋಯಿಸ್ (Archana jois) , ಅನಿರುದ್ಧ್ ಆಚಾರ್ಯ , ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ (Ramohalli jagananth) ಪರಿಸರ ಉಳಿವಿಗಾಗಿ ಬೈಸಿಕಲ್ ಚಲಾಯಿಸಿ ಜಾಗೃತಿ ಮೂಡಿಸಿದರು.ಇದೇ ಭಾನುವಾರ ಹಮ್ಮಿಕೊಳ್ಳಲಾಗಿರುವ We Run for cause ಎಂಬ ಮ್ಯಾರಾಥಾನ್ ನಲ್ಲಿಯೂ ಹೊಂದಿಸಿ (Marathon) ಬರೆಯಿರಿ ಸಿನಿಮಾ ತಂಡ ಭಾಗಿಯಾಗಲಿದೆ. ಇದನ್ನೂ ಓದಿ : – “ತುರ್ತು ನಿರ್ಗಮನ” ದ ಮೂಲಕ ಸುನೀಲ್ ರಾವ್ ರೀ ಎಂಟ್ರಿ.. ಚಿತ್ರದ ವಿಭಿನ್ನ ಟ್ರೇಲರ್ ಗೆ ಭಾರಿ ಮೆಚ್ಚುಗೆ

ಈ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಹೊಂದಿಸಿ ಬರೆಯಿರಿ ಬಳಗ ಕೈ ಜೋಡಿಸಿದೆ. ಜೂನ್ 24ಕ್ಕೆ ಮೊದಲ ಹಾಡು ರಿಲೀಸ್ಟೀಸರ್ ಮೂಲಕ ಈಗಾಗಲೇ ಹೊಸ ಭರವಸೆ ಹುಟ್ಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾದ ಮೊದಲ ಹಾಡು, ಇದೇ ತಿಂಗಳ 24ಕ್ಕೆ ಬಿಡುಗಡೆಯಾಗಲಿದೆ. ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ ಹೊಂದಿಸಿ ಬರೆಯಿರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ವಿದ್ಯಾರ್ಥಿ ಜೀವನ, ಕಾಲೇಜು ನಂತರದ ಜೀವನದ ಏರಿಳಿತದ 12 ವರುಷಗಳ ಸುದೀರ್ಘ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀಮಹದೇವ್, ಭಾವನಾರಾವ್ ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅನಿರುದ್ದ್ ಆಚಾರ್ಯ ಸೇರಿದಂತೆ ಹಲವು ಪ್ರತಿಭೆಗಳು ನಟಿಸಿದ್ದಾರೆ.

ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ.. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ : –  ಜೂನ್ 24ಕ್ಕೆ ಸಿನಿಮಾ ತ್ರಿವಿಕ್ರಮನ ದರ್ಶನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!