ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ (Congress strike) ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ್ (Ashwath narayan) ವ್ಯಂಗ್ಯವಾಡಿದ್ದಾರೆ. ED ಕಡೆ ಹೋಗೋ ಪ್ರತಿಭಟನೆ ಇನ್ನೊಂದು ದಿನ ತಿಹಾರ್ ಜೈಲಿಗೂ (Tihar jail) ಹೋಗಬಹುದು ಎಂದು ಲೇವಡಿ ಮಾಡಿದ್ದಾರೆ. 2011 ರಲ್ಲಿ ಕೋರ್ಟ್ ಇಡಿ ತನಿಖೆಗೆ ಆದೇಶ ಮಾಡುತ್ತೆ.
ಆ ಸಂದರ್ಭದಲ್ಲಿ ಯಾವ ಸರ್ಕಾರ ಇತ್ತು? ಎಂದು ಪ್ರಶ್ನಿಸಿದ್ದಾರೆ. ಅಧಿಕಾರ ದುರ್ಬಳಕೆ ಅನ್ನೋ ಆರೋಪಕ್ಕೆ ಅರ್ಥ ಇಲ್ಲ. ಅವರ ಸರ್ಕಾರ ಇದ್ದಾಗಲೇ ED ತನಿಖೆಗೆ ವಹಿಸಲಾಗಿತ್ತು. ಈಗ ಇವ್ರು ಬಿಜೆಪಿ ಮೇಲೆ ಅಧಿಕಾರ ದುರ್ಬಳಕೆ ಆರೋಪ ಮಾಡ್ತಿರೋದು ಸತ್ಯಕ್ಕೆ ದೂರ ಎಂದು ಹೇಳಿದ್ರು.
ಹೆರಾಲ್ಡ್ ಹಣ ಲಪಟಾಯಿಸಲು ಸಂಚು
ED ವಿಚಾರಣೆಯನ್ನು ರಾಹುಲ್ (Rahul gandhi) ಹಾಗೂ ಸೋನಿಯಾಗಾಂಧಿ (Soniya gandhi) ಎದುರಿಸಲಿ, ಏನು ಸತ್ಯ ಇದೆ ಹೇಳಲಿ. ಕಾಂಗ್ರೆಸ್ ಪ್ರತಿಭಟನೆ ಸರಿಯಲ್ಲ, ED ವಿರುದ್ಧವೂ ಅವರು ಮಸಿ ಬಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ತಪ್ಪು ಮಾಡಿ ಈಗ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಈ ಪ್ರತಿಭಟನೆ, ಬೆದರಿಕೆಗಳಿಗೆ ಬೆಲೆ ಇಲ್ಲ, ಮಾನ್ಯತೆಯಿಲ್ಲ, ಸ್ಪಷ್ಟತೆ ಇಲ್ಲದೇ, ಕಾನೂನಿಗೆ ಗೌರವ ಇಲ್ಲದವರು ಬೇರೆ ಜವಾಬ್ದಾರಿ ಹೇಗೆ ನಿಭಾಯಿಸ್ತಾರೆ. ಕಾಂಗ್ರೆಸ್ ನವ್ರ ಡಿಕ್ಷನರಿಯಲ್ಲೇ ಭ್ರಷ್ಟಾಚಾರ, ಅರಾಜಕತೆ ಇದೆ. ಅವರ ಡಿಕ್ಷನರಿಯಲ್ಲಿ ರಾಷ್ಟ್ರೀಯತೆ ಇಲ್ಲ. ಅವರ್ಯಾರೂ ಕಾನೂನಿಗಿಂತ ದೊಡ್ಡವರಲ್ಲ ದೇಶವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದ್ರು. ಇದನ್ನೂ ಓದಿ : – ಸೋನಿಯಾ ಗಾಂಧಿ ಯಾರಿಗೂ ಹೆದರುವುದಿಲ್ಲ – ಈಶ್ವರ ಖಂಡ್ರೆ
ನ್ಯಾಷನಲ್ ಹೆರಾಲ್ಡ್, 2008 ರಲ್ಲಿ ಮುಚ್ಚಿಹೋಗುತ್ತೆ. 2010 ರಲ್ಲಿ ಯಂಗ್ ಇಂಡಿಯಾ ಸ್ಥಾಪನೆ ಮಾಡಿ ಅದರ ಮೂಲಕ ನ್ಯಾಷನಲ್ ಹೆರಾಲ್ಡ್ ಖರೀದಿ ಮಾಡಲಾಗುತ್ತದೆ. ಕೇವಲ 50 ಲಕ್ಷ ರೂಗೆ ಯಂಗ್ ಇಂಡಿಯಾಗೆ ನ್ಯಾಷನಲ್ ಹೆರಾಲ್ಡ್ ಮಾರಾಟ ಮಾಡಲಾಗುತ್ತೆ. ಇದರಲ್ಲಿ 74% ಸೋನಿಯಾ, ರಾಹುಲ್ ಷೇರುದಾರರಾಗಿದ್ದಾರೆ. ಎರಡು ಸಾವಿರ ಕೋಟಿ ಮೌಲ್ಯದ ಪತ್ರಿಕೆ ಕೇವಲ 50 ಲಕ್ಷಕ್ಕೆ ಮಾರಾಟ ಆಗುತ್ತೆ ಎಂದು ಹೇಳಿದ್ರು. ಇದನ್ನೂ ಓದಿ : – ನ್ಯಾಷನಲ್ ಹೆರಾಲ್ಡ್ ಪ್ರಕರಣ- ಭೋಜನ ವಿರಾಮದ ಬಳಿಕ ರಾಹುಲ್ ವಿಚಾರಣೆ