ಬೆಂಗಳೂರು: ಕುಡಿತದ ಚಟಕ್ಕೆ ಬಿದ್ದವರನ್ನ ರಿಹಾಬ್ ಸೆಂಟರ್‌ಗಳಿಗೆ ಸೇರಿಸೊ ಕುಟಂಬಸ್ಥರು ನೋಡಲೇಬೇಕಾದ ಸ್ಟೋರಿ ? ಬೆಂಗಳೂರಿನ ರಿಹಾಬ್ ಸೆಂಟರ್‌ಗಳಿಗೆ ಸೇರಿದ್ರೆ ಆಸ್ಪತ್ರೆ ಪಾಲಾಗೋದು ಗ್ಯಾರಂಟಿ ಎನ್ನುವುದು ಈ ಸ್ಟೋರಿಯಿಂದಲೇ ಗೊತ್ತಾಗುತ್ತೆ.
ಪ್ರವೀಣ್ ಎಂಬ ವ್ಯಕ್ತಿ ವೀಪರೀತ ಕುಡಿತದಿಂದ ತನ್ನ ಸಂಸಾರವನ್ನು ಹಸಿವಿನಿಂದ ಬಳಲಲು ಬಿಟ್ಟಿದ್ದ ಇದನ್ನು ನೋಡಲಾಗದ ತಮ್ಮ ತನ್ನ ಅಣ್ಣ ಸರಿಯಾಗಲು ಕಾಮಾಕ್ಷಿಪಾಳ್ಯದಲ್ಲಿರುವ RASP ರಿಹಾಬ್ ಸೆಂಟರ್‌ಗೆ ಬಿಡಲು ಪ್ಲಾನ್ ಮಾಡಿ ಬಿಟ್ಟಿರುತ್ತಾನೆ ಆದರೆ ಅಲ್ಲಿ ನಡೆದಿದ್ದೆ ಬೇರೆ. ಅಮಾಯಕನಾಗಿದ್ದ ಪ್ರವೀಣ್‌ಗೆ ನರಕಯಾತನೆ ತೋರಿಸಿದ್ದಾರೆ.ಪ್ರವೀಣ್‌ಗೆ ಮದುವೆಯಾಗಿ ಒಂದು ಹೆಣ್ಣು ಮಗು ಸಹ ಇತ್ತು ಆದ್ರೆ ವಿಪರೀತ ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನ ಉಪವಾಸ ಕೆಡವಿದ್ದ ಹೀಗಾಗಿ ಪ್ರವೀಣ್ ತಮ್ಮ ಅಣ್ಣನ ಸರಿಪಡಿಸಲು ರಿಹಾಬ್ ಸೆಂಟರ್‌ಗೆ ಸೇರಿಸಿದ್ರು.
ಆದ್ರೆ ರಿಹಾಬ್ ಸೆಂಟರ್‌ನವರು ಮಾಡಿದ್ದು ಮಾತ್ರ ಅಮಾನವಿಯ ಕೆಲಸ ಏನಂದರೆ ಅಲ್ಲಿನ ಸಿಬ್ಬಂದಿ ಪ್ರವೀಣ್‌ಗೆ ಎರಡು ದಿನ ಕೈಕಾಲು ಕಟ್ಟಿ ಸ್ವಾದೀನ ಕಳೆದುಕೊಳ್ಳುವಂತೆ ಹಲ್ಲೆ ಮಾಡಿದ್ದಾರೆ ಈ ವೇಳೆ ಪ್ರವೀಣ್ ಪ್ರಜ್ಞಾಹೀನನಾದಾಗ ಮನೆಯವರಿಗೆ ಹಲ್ಲೆ ಮಾಡಿದ್ದನ್ನು ಮುಚ್ಚಿಟ್ಟು ಪ್ರಜ್ಞೆ ತಪ್ಪಿದ್ದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪ್ರವೀಣ್ ಚಿಕಿತ್ಸೆ ಬಳಿಕ ಪ್ರಜ್ಞೆ ಬಂದಾಗ ರಿಹಾಬ್ ಸೆಂಟರ್‌ನವರು ಮಾಡಿದ ಅಸಲಿ ವಿಚಾರ ಬಹಿರಂಗವಾಗಿದೆ.ಈ ರೀತಿ ಕೈಕಾಲು ಸ್ವಾದೀನ ಕಳೆದುಕೊಂಡ ರೀತಿಯಲ್ಲಿ ಹಲ್ಲೆ ಮಾಡಿದ್ದಕ್ಕೆ ಕುಟುಂಬಸ್ಥರು ಹಿಡಿಶಾಪ ಹಾಕಿದ್ದಾರೆ.
ಆರ್ .ಎ .ಎಸ್ .ಪಿ (RASP) ರಿಹಾಬ್ ಸೆಂಟರ್ ವಿವೇಕ್ ಎಂಬುವವರಿಗೆ ಸೇರಿದ್ದಾಗಿದ್ದು ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ಕೊಟ್ಥ ಪ್ರವೀಣ್ ಕುಟುಂಬಸ್ಥರು ಆದ್ರೆ ಪೊಲೀಸರು FIR ದಾಖಲಿಸಿದ್ದರು ಯಾವ ರಿಹಾಬ್ ಸೆಂಟರ್ ಹಾಗೂ ಮಾಲೀಕನ ಹೆಸರು ಮಾತ್ರ ಅದರಲ್ಲಿ ನಮೋದಿಸದೇ ಪ್ರಕರಣ ದಾಖಲಿಸಿದ್ದಾರೆ. ಈ ರೀತಿ ಯಾಕೆ ಮಾಡಿದ್ದಾರೆಂದು ಗೊತ್ತಾಗಬೇಕಿದೆ ಆದ್ರೆ ಸದ್ಯ ಸಮಾಜಕ್ಕೆ ತೊಡಕಾಗಿರುವ ಇಂತಹ ರಿಯಾಬ್ ಸೆಂಟರ್ ಬಂದ್ ಮಾಡಿಸಲು ಕುಟುಂಬಸ್ಥರ ಮಾತ್ರ ಪೊಲೀಸರೆದುರು ಪಟ್ಟು ಹಿಡಿದು ಕುಳಿತಿದ್ದಾರೆ. ಮುಂದೆ ಪೊಲೀಸರು ಏನ್ಮಾಡ್ತಾರೆ ಎಂಬುದು ಗೊತ್ತಾಗಬೇಕಿದೆ.