ಮಿಸುಕದ ‘ಎವರ್​ಗಿವನ್​​’: ಸಿಗ್ನಲ್​ಗಾಗಿ ಕಾಯುತ್ತಿವೆ 200 ಹಡಗುಗಳು

ಕೈರೋ: ಸುಯೆಜ್​ ಕಾಲುವೆಯಲ್ಲಿ ಸಿಲುಕಿರುವ ಬೃಹತ್​ ಹಡಗು ‘ಎವರ್​ಗಿವನ್​’ನ್ನು ತೆರವುಗೊಳಿಸಲು ಇನ್ನೂ ಸಾದ್ಯವಾಗಿಲ್ಲ. ಹೀಗಾಗಿ ಸುಯೆಜ್​ ಕಾಲುವೆಯಲ್ಲಿ 200 ಸರಕು ಸಾಗಣೆಯ ಹಡಗುಗಳು ಸಾಲುಗಟ್ಟಿ ನಿಂತಿವೆ. ಎವರ್​ಗಿವನ್​ ಹಡಗನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಟಗ್​ ಬೋಟ್​ಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸುಯೆಜ್​ ಕಾಲುವೆಯ ಬಳಿ ಸಾಲುಗಟ್ಟಿ ನಿಂತಿರುವ ಏಷ್ಯಾ ಮತ್ತು ಯೂರೋಪ್​ ನಡುವೆ ಸಂಚರಿಸುವ ಹಡಗುಗಳ ಉಪಗ್ರಹ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಎವರ್​ಗಿವನ್​ ಮರೈನ್​ ಸಂಸ್ಥೆ. ನಾವೀಗ ಕಷ್ಟದ ಸಂದರ್ಭದಲ್ಲಿ ಸಿಲುಕಿದ್ದೇವೆ. ಸುಯೆಜ್​ನಲ್ಲಿ ಸಿಲುಕಿರುವ ಹಡಗನ್ನು ತೆರವುಗೊಳಿಸಲು ನಾವು ಕಳೆದೊಂದು ವಾರದಿಂದ ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ.

ಹಡಗು ತೆರವು ಕಾರ್ಯಾಚರಣೆ ಯಾವಾಗ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದಿದೆ. ಹಡಗು ಸಿಲುಕಿರುವ ಪರಿಣಾಮ ಒಂದು ದಿನಕ್ಕೆ 9.6 ಬಿಲಿಯನ್ ಅಮೆರಿಕನ್​ ಡಾಲರ್​ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಸುಯೆಜ್​ ಕಾಲುವೆಯ ಪ್ರದೇಶದ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಹಡಗು ತೆರವು ಕಾರ್ಯಾಚರಣೆ ವಿಳಂಬವಾಗುತ್ತಿದೆ. ಈ ಸಮಸ್ಯೆ ಹೇಗಾಯಿತು ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎಂದು ಸುಯೆಜ್​ ಕಾಲುವೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!