ತಂದೆ-ತಾಯಿಯನ್ನು ಸದ್ಯಕ್ಕೆ ಭೇಟಿ ಮಾಡದೇ ಇರಲು ಸಿಡಿ ಯುವತಿ ನಿರ್ಧರಿಸಿರುವುದಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಾದಿಸುತ್ತಿರುವ ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್, ಇವತ್ತು ಕೋರ್ಟ್ ಗೆ ರಜೆ ಇದೆ. ಆದ್ದರಿಂದ ತಂದೆ-ತಾಯಿಯನ್ನು ಭೇಟಿ ಮಾಡುವುದಾದರೆ ಮಾಡಿ ಎಂದು ಸಲಹೆ ನೀಡಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಭೇಟಿ ಮಾಡಲ್ಲ ಅಣ್ಣ ಎಂದು ಹೇಳಿದ್ದಾರೆ ಎಂದರು.
ಇವತ್ತು ಕೊರ್ಟ್ ಬೇರೆ ರಜೆ ಇದೆ. ಎಸ್ ಐಟಿಯವರು ಇವತ್ತು ಯುವತಿಗೆ ಬರಬೇಕೆಂದು ನೋಟಿಸ್ ಕೊಟ್ಟಿಲ್ಲ. ಮಹಿಳಾ ಪೊಲೀಸರು ಯುವತಿಗೆ ಭದ್ರತೆ ನೀಡಿದ್ದಾರೆ. ಯುವತಿ ತಂದೆ ತಾಯಿಯನ್ನ ಭೇಟಿ ಮಾಡೊದಾದ್ರೆ ಮಾಡಿ ಅಂತ ಸಲಹೆ ನೀಡಿದೆ. ಆದರೆ ಆಕೆಯ ವರ್ಷನ್ ಬೇರೆ ಇದೆ. ಜನ ಸಪೊರ್ಟ್ ಮಾಡ್ತಿದ್ದಾರೆ. ಎಫ್.ಐ.ಆರ್ ಆಗಿದೆ, ಈಗ ಸಾಕಷ್ಟು ಜವಾಬ್ದಾರಿ ಇದೆ. ಸದ್ಯಕ್ಕೆ ತಂದೆ ತಾಯಿಯನ್ನ ಭೇಟಿ ಮಾಡೋದು ಬೇಡ ಅಂತ ಹೇಳಿದ್ದಾರೆ ಎಂದು ಜಗದೀಶ್ ವಿವರಿಸಿದರು.