ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೇನು ನಾಲ್ಕು ದಿನ ಬಾಕಿ ಉಳಿದಿದ್ದು, ಇದಕ್ಕು ಮುನ್ನ ಡಿಎಂಕೆ ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಎಂಕೆ ನಾಯಕ ಎಂ. ಕೆ ಸ್ಟಾಲಿನ್ ಅಳಿಯ ಶಬರೀಸನ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಇದೇ ವೇಳೆ ಅಣ್ಣಾನಗರದ ಡಿಎಂಕೆ ಅಭ್ಯರ್ಥಿ ಮೋಹನ್ ಅವರ ಮಗನ ಮನೆ ಮೇಲೂ ದಾಳಿ ನಡೆಸಲಾಗಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ಡಿಎಂಕೆ ಕಾರ್ಯತಂತ್ರ ಸಭೆ ನಡೆಸುತ್ತಿದ್ದ ಶಬರೀಸನ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಇತ್ತೀಚೆಗೆ ಡಿಎಂಕೆ ಪ್ರಬಲ ವ್ಯಕ್ತಿ ಇವಿ ವೇಲು ಅವರ ಮನೆ ಮತ್ತು ಕಚೇರಿ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು