ಉಕ್ರೇನ್: ಮುಂದಿನ ಕೆಲವೇ ದಿನಗಳಲ್ಲಿ ಜಗತ್ತು ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆಯಾ ಎಂಬ ಚರ್ಚೆ ನಡೆಯುತ್ತಿದೆ. ಈ ಸಂಬಂಧ ರಷ್ಯಾದ ಮಿಲಿಟರಿ ಪರಿಣಿತರು ಎಚ್ಚರಿಕೆ ನೀಡಿದ್ದಾರೆ.
ಪೂರ್ವ ಉಕ್ರೇನ್ ಈಗ ಬಂಡುಕೋರರ ಹಿಡಿತದಲ್ಲಿದೆ. ಇಲ್ಲಿಗೆ ಸಮೀಪವಿರುವ ಪ್ರದೇಶಗಳಲ್ಲಿ ರಷ್ಯಾ ಬೃಹತ್ ಪ್ರಮಾಣದಲ್ಲಿ ಟ್ಯಾಂಕರ್ಗಳನ್ನು ನಿಯೋಜಿಸುತ್ತಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ಹೀಗೆ ಬೃಹತ್ ಪ್ರಮಾಣದಲ್ಲಿ ಟ್ಯಾಂಕರ್ಗಳ ನಿಯೋಜನೆ ವಿಶ್ವಯುದ್ಧದ ತಯಾರಿಯಾ ಎಂಬ ಚರ್ಚೆ ನಡೆದಿದೆ. ಮಿಲಿಟರಿ ಪರಿಣಿತ ಪಾವೆಲ್ ಫೆಲ್ಗೆನೌರ್ ಇನ್ನು ಕೆಲವೇ ದಿನಗಳಲ್ಲಿ ವಿಶ್ವಯುದ್ಧ ನಡೆದರೆ ಅಚ್ಚರಿ ಪಡುವಂತಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ ಬಳಿ ರಷ್ಯಾ ತನ್ನ ಸೈನ್ಯ ಶಕ್ತಿಯನ್ನು ಹೆಚ್ಚಿಸುತ್ತಿದೆ. ರಷ್ಯಾದ ಸದ್ಯಸ ಮಿಲಿಟರಿ ನೀತಿ ಜಗತ್ತನ್ನು ಮಹಾಯುದ್ಧದ ಅಂಚಿಗೆ ತಳ್ಳಿದರೆ ಆಶ್ಚರ್ಯವಿಲ್ಲ. ರಷ್ಯಾದ ಕೆಲವು ಪ್ರದೇಶಗಳಲ್ಲಿ ಉಂಟಾಗುತ್ತಿರುವ ಹೆಚ್ಚಿನ ಮಿಲಿಟರಿ ಚಲನವಲನಗಳಿಗೆ ಸಂಬಧಿಸಿದಂತೆ ವಿಡಿಯೋಗಳನ್ನು ನೋಡುತ್ತಿರುವ ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಫೆಲ್ಗೆನೌರ್ ಕಳವಳ ವ್ಯಕ್ತಪಡಿಸಿದ್ದಾರೆ.