ಮಾತು ಬಾರದ ಮಹಿಳೆ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಂಡ್ಯದ ಪಾಂಡವಪುರದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿಯಲ್ಲಿ 48 ವರ್ಷದ ಮಾತು ಬಾರದ ಮಹಿಳೆ ಮೇಲೆ ಸ್ಥಳೀಯ ನಿವಾಸಿಗಳಾದ ಪ್ರಸನ್ನ, ಶೇಖರ್, ಕವನ್ ಎಂಬುವರಿಂದ ಕೃತ್ಯ ಅತ್ಯಾಚಾರ ಎಸಗಿದ್ದಾರೆ.
ಕೈ ಸನ್ನೆ ಮೂಲಕ ಕರೆದ ಕಾಮುಕರು, ಹತ್ತಿರಕ್ಕೆ ಬರುತ್ತಿದ್ದಂತೆ ಹೊಂಗೆ ಮರದ ಬಳಿಗೆ ಹೊತ್ತೋಯ್ತು ಅತ್ಯಾಚಾರ ಎಸಗಿದ್ದಾರೆ. 2-3 ದಿನಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಏಪ್ರಿಲ್ 1 ರಂದು ಈ ಘಟನೆ ನಡೆದಿದ್ದು, ಕೃತ್ಯ ಬೆಳಕಿಗೆ ಬಂದ ಬಳಿಕ ದೂರು ನೀಡದಂತೆ ಸಂತ್ರಸ್ತೆ ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗಿದ್ದು, ಆರೋಪಿಗಳ ಕುಟುಂಬಸ್ಥರಿಂದ ಸಂಧಾನಕ್ಕೆ ಪ್ರಯತ್ನ ನಡೆದಿದೆ. ಸಂಧಾನಕ್ಕೆ ಒಪ್ಪದ ಸಂತ್ರಸ್ತೆ ಪುತ್ರ ದೂರು ನೀಡಿದ್ದಾರೆ. ಪಾಂಡವಪುರ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.