ಬೆಂಗಳೂರು: ಹಳೇ ಲವರ್ ಬಿಟ್ಟು ಹೋದಮೇಲೆ ಹೊಸ ಲವರ್ ಜೊತೆ ಸುತ್ತಾಡ್ತುರೋದನ್ನ ಕಂಡು ಹಳೇ ಫೋಟೋ ವೈರಲ್ ಮಾಡ್ತಿನಿ ಅಂತ ಬ್ಲಾಕ್ ಮಾಡಿದ್ಳಂತೆ. ಈ ಟಾರ್ಚರ್’ಗೆ ಟೆಕ್ಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಸಾವಿಗೆ ಹಳೇ ಲವ್ವರ್ ಹಾಗೂ ಹೊಸ ಲವ್ವರ್ ಇಬ್ಬರೂ ಕಾರಣವೆಂದು ಕುಟುಂಬಸ್ಥರು ದೂರು ನೀಡಿದ್ದಾರೆ.
ಪ್ರತಿಷ್ಟಿತ ಖಾಸಗಿ ಕಂಪನಿಯಲ್ಲಿದ್ದ ಕೆಲಸ ಮಾಡ್ತಿದ್ದ ಸಂತೋಷ ಕಂಪನಿಯ ಯುವತಿಯನ್ನ ಪ್ರೀತಿಸ್ತಿದ್ದ. ಇಬ್ಬರು ನಾಲ್ಕು ವರ್ಷಗಳಿಂದ ಲವ್ ಮಾಡಿ ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ಬ್ರೇಕಪ್ ನ ನಂತರ ಅದೇ ಕಂಪನಿಯ ಮತ್ತೊಬ್ಬ ಯುವತಿಯ ಜೊತೆ ಸಂತೋಷ್ ಗೆ ಲವ್ ಆಗಿದೆ. ಇದೇ ವಿಚಾರಕ್ಕೆ ಸಂತೋಷ್ ಗೆ ಹಳೆ ಲವರ್ ಕಪಾಳ ಮೋಕ್ಷ ಮಾಡಿ ಮೊದಲು ನನ್ನ ಜೊತೆಯಲ್ಲಿದ್ದ ಪೊಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿನೆಂದು ಹಳೇ ಲವರ್ ನಿಂದ ಧಮ್ಕಿ ಹಾಕಿದ್ಳಂತೆ. ನಂತರ ಎರಡು ಕುಟುಂಬದವರು ಕೂತು ಮಾತಾಡಿ ಒಪ್ಪಿದ ಮೇಲೆ ನಿನಗೂ ಸಂತೋಷ್ ಮದುವೆ ಮಾಡ್ತಿವಿ ಎಂದಿದ್ದ ಮೃತ ಕುಟುಂಬಸ್ಥರು ಮನವೊಲಿಸಿದ್ದಾರೆ.
ಈ ವೇಳೆ ಮೊದಲ ಲವ್ವರ್ ಗೆ ಕಂಪನಿಯಿಂದ ಬೇರೆಡೆಗೆ ಟ್ರಾನ್ಸ್ ಫರ್ ಆಗಿದ್ದು ಈ ಟ್ರಾನ್ಸ್ಫರ್ ಗೆ
ಸಂತೋಷ್ ಹಾಗೂ ಆತನ ಹೊಸ ಗೆಳತಿ ಸೇರಿಕೊಂಡೇ ಕಾರಣ ಎಂದು ಟ್ರಾನ್ ಫರ್ ಮಾಡಿಸಿದ್ದಾರೆಂದು ಸಂತೋಷ್ ಗೆ ಕರೆ ಮಾಡಿ ಹಳೆ ಲವ್ವರ್ ಮತ್ತೆ ಬೈದಿದ್ಳಂತೆ. ಇದ್ರಿಂದ ನೊಂದು ಲವ್ವರ್ಸ್ ಕಾಟಕ್ಕೆ ಬೇಸತ್ತು ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಮೃತನ ಕುಟುಂಬಸ್ಥರ ದೂರಿನನ್ವಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಾಗಿದ್ದು, ಕೇಸ್ ನಲ್ಲಿ ಹಳೇ ಲವ್ವರ್ A1 ಆರೋಪಿಯಾದ್ರೆ ಹೊಸ ಲವ್ವರ್ A2 ಆರೋಪಿಯಾಗಿದ್ದಾಳೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್