ಬೆಂಗಳೂರು: ಈ ಆವೃತ್ತಿಯ ಐಪಿಎಲ್ಗೆ ಈಗಾಗಲೇ ಚಾಲನೆ ದೊರೆತಿದೆ. ನಿನ್ನೆ ನಡೆದ ಈ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡ ಜಯಶಾಲಿಯಾಗಿತ್ತು. ಆರ್ಸಿಬಿ ಗೆಲುವಿಗೆ ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ ಕಾರಣರಾಗಿದ್ದರು.
ಕೇವಲ 27 ಎಸೆತಗಳಲ್ಲಿ 48ರನ್ಗಳನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದರು. ಆಪದ್ಭಾಂದವ ಎಬಿಡಿ ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಮೆಮೆಗಳು ಹರಿದಾಡುತ್ತಿವೆ. ಎಬಿಡಿ ಅವರ ಸ್ಫೋಟಕ ಬ್ಯಾಟಿಂಗ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ಕ್ರಿಕೆಟ್ಟಿಗರೂ ಸಹ ಎಬಿಡಿ ಅವರ ಬ್ಯಅಟಿಂಗ್ ಶೈಲಿಯ ಬಗ್ಗೆ ಮಾತನಾಡುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಲೋಗೊವನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಲೋಗೊ ಎಬಿಡಿ ವಿಲಿಯರ್ಸ್ ಅವರ ಹೊಡೆತದ ಭಂಗಿಯನ್ನು ಹೋಲುತ್ತದೆ. ಇದೇ ಕಾರಣಕ್ಕಾಗಿ ವೀರೇಂದ್ರ ಸೆಹ್ವಾಗ್ ಇಂತಹದೊಂದು ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್, ಸಂಕಲ್ಪ ಶಕ್ತಿ ಎಂಬುದು ಡಿ ವಿಲಿಯರ್ಸ್ ಪವರ್ಗೆ ಸಮಾನವಾಗಿದೆ. ಐಪಿಎಲ್ ಲೋಗೊವನ್ನು ಎಬಿ ಡಿ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ‘ಚಾಂಪಿಯನ್ ಆಟ’ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಈ ಟ್ವೀಟ್ಗೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.