ಕೊರೊನಾ 2ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜಾರಿಯಾದ ರಾತ್ರಿ ಕರ್ಫ್ಯೂ ಮೊದಲ ದಿನವೇ 61 ವಾಹನಗಳನ್ನು ಸಿಜ್ ಮಾಡಲಾಗಿದೆ.
ಅನಗತ್ಯವಾಗಿ ಸಂಚರಿಸುತ್ತಿದ್ದ 61 ವಾಹನಗಳನ್ನು ಬೆಂಗಳೂರು ಅಗ್ನೇಯ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
55 ದ್ವಿಚಕ್ರ ವಾಹನಗಳು 5 ನಾಲ್ಕು ಚಕ್ರದ ವಾಹನಗಳು ಹಾಗೂ 1 ಮೂರು ಚಕ್ರದ ವಾಹನ ಸೀಜ್ ಮಾಡಲಾಗಿದೆ.
ನೈಟ್ ಕರ್ಪ್ಯೂ ಜಾರಿಯಾಗಿದ್ರು ಅನಾವಶ್ಯಕವಾಗಿ ರಸ್ತೆಗೆ ಇಳಿದಿದ್ದ ವಾಹನಗಳನ್ನು ಮುಲಾಜಿಲ್ಲದೇ ಸೀಜ್ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದರು. ಆದರೂ ಜನರು ರಾತ್ರಿ ಕರ್ಫ್ಯೂ ನಿಯಮ ಮೀರಿ ಸಂಚರಿಸುತ್ತಿದ್ದರು.