ಕರ್ನಾಟಕದ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೇರಳದ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ಪರಸ್ಪರ ಎದುರಾಗುತ್ತಿವೆ.
ಕಳೆದ ಬಾರಿ ಉತ್ತಮ ಪ್ರದರ್ಶನದ ಹೊರತಾಗಿಯೂ ಕೊನೆಯ ಹಂತದಲ್ಲಿ ಎಡವಿದ್ದರಿಂದ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿದ್ದವು. ಕೆ.ಎಲ್. ರಾಹುಲ್ ಎರಡು ಆವೃತ್ತಿಗಳಿಂದ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದರೆ, ಸ್ಯಾಮ್ಸನ್ ಇದೇ ಮೊದಲ ಬಾರಿ ನಾಯಕತ್ವದ ಜವಾಬ್ದಾರಿ ವಹಿಸಿದ್ದಾರೆ.
ರಾಜಸ್ಥಾನ ತಂಡಕ್ಕೆ ಸ್ವತಃ ನಾಯಕ ಸ್ಯಾಮ್ಸನ್ ಅಲ್ಲದೇ ಸಿಡಿಲಬ್ಬರದ ಹೊಡೆತಗಳ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ಆಗಮನ ಬಲ ಹೆಚ್ಚಿಸಿದೆ. ಅಲ್ಲದೇ ಜೈಸ್ವಾಲ್, ರಾಹುಲ್ ತವಾಟಿಯ, ಶ್ರೇಯಸ್ ಗೋಪಾಲ್, ಶಿವಂ ದುಬೆ, ರಿಯಾನ್ ಪರಾಗ್ ಮತ್ತು ಲಿಯಾಮ್ ಲಿಂಗ್ವಿಸ್ಟೋನ್ ಮುಂತಾದವರು ಇದ್ದಾರೆ.
ರಾಹುಲ್ ಪಡೆಯಲ್ಲಿ ಕ್ರಿಸ್ ಗೇಲ್, ಮಯಾಂಕ್ ಅಗರ್ ವಾಲ್, ಕಳೆದ ಬಾರಿ ಮಿಂಚಿದ್ದು, ಈ ಬಾರಿಯೂ ಅವರ ಮೇಲೆ ಒತ್ತಡವಿದೆ. ಈ ಬಾರಿ ಡೇವಿಡ್ ಮಲಾನ್ ಸೇರ್ಪಡೆ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದೆ. ದೀಪಕ್ ಹೂಡಾ, ಮೊಹಮದ್ ಶಮಿ ಮುಂತಾದವರ ಬೌಲಿಂಗ್ ಬಲವಿದೆ.