ಬೆಂಗಳೂರು: ಬಲವಾದ ಸುವಾಸನೆ ಹಾಗೂ ಕಹಿ ರುಚಿ ಹೊಂದಿರುವ ಮೆಂತ್ಯೆ ಕಾಳನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿದಾಗ ಅದು ನಮ್ಮ ಅಡುಗೆಯ ರುಚಿ ಹೆಚ್ಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಪದಾರ್ಥ, ತರಕಾರಿ ಅಡುಗೆ, ದಾಲ್ ಮತ್ತು ಮೆಂತ್ಯೆಯ ಪರಾರ್ಥಗಳಲ್ಲಿ ಇದನ್ನು ಬಳಸಲಾಗುತ್ತದೆ. ಅಡುಗೆಗೆ ಬಳಸಲ್ಪಡುವ ಮೆಂತ್ಯೆಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣಗಳಿವೆ.
ಮೆಂತ್ಯೆಯಲ್ಲಿರುವ ಡಿಯೊಸ್ಗನಿನ್ ಸಂಯುಕ್ತ ಮತ್ತು ಈಸ್ಟ್ರೊಜೆನ್ ತರಹದ ಗುಣಗಳನ್ನು ಐಸೊಫ್ಲೆವೊನ್ಸ್ ಗಳು ಪಿಎಂಎಸ್ ಗೆ ಸಂಬಂಧಿತ ಕಿರಿಕಿರಿ ಮತ್ತು ಋತುಚಕ್ರದ ವೇಳೆ ಉಂಟಾಗುವಂತಹ ಸೆಳೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಸಂಯುಕ್ತಗಳು ಮುಟ್ಟು ನಿಲ್ಲುವಾಗ ಉಂಟಾಗುವ ಮನಸ್ಥಿತಿ ಬದಲಾಗುವುದನ್ನು ಕಡಿಮೆ ಮಾಡುತ್ತದೆ.
ಮೆಂತ್ಯೆ ಸೊಪ್ಪಿನಂತಹ ಹಸಿರು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಉತ್ತಮ ಗುಣಮಟ್ಟದ ಕಬ್ಬಿನಾಂಶ ಪಡೆಯಬಹುದು. ಟೊಮೆಟೊ ಅಥವಾ ಬಟಾಟೆಯನ್ನು ಮೆಂತ್ಯೆ ಸೊಪ್ಪಿನೊಂದಿಗೆ ಸೇರಿಸಿದರೆ ಕಬ್ಬಿನಾಂಶ ಪಡೆಯಬಹುದು.
ಮೆಂತ್ಯೆ ಕಾಳು ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದು ಅಜೀರ್ಣ ತಡೆಯುತ್ತದೆ ಮತ್ತು ಮಲಬದ್ಧತೆ ಸುಧಾರಿಸಲು ನೆರವಾಗುತ್ತದೆ.
ನೆನೆಸಿದ ಮೆಂತ್ಯೆ ಕಾಳುಗಳನ್ನು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸಿದರೆ ತೂಕ ತಗ್ಗಿಸಬಹುದು. ನೈಸರ್ಗಿಕವಾಗಿ ಹೀರಿಕೊಳ್ಳುವಂತಹ ನಾರಿನಾಂಶವು ಹೊಟ್ಟೆ ತುಂಬುವಂತೆ ಮಾಡಿ ಹಸಿವು ಕಡಿಮೆ ಮಾಡುತ್ತದೆ.
ಮೆಂತ್ಯ ನೀರನ್ನು ಕುಡಿಯುವುದರಿಂದ ಮತ್ತು ಮೆಂತ್ಯೆಯನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಮೆಂತ್ಯದಲ್ಲಿ ಈ ಗ್ಲುಕೋಮೆನನ್ ಮತ್ತು ಪೊಟ್ಯಾಶಿಯಂ ಇದೆ ಇವೆರಡು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸುಂದರ ಚರ್ಮವು ಪ್ರತಿಯೊಬ್ಬರಿಗೂ ಬೇಕು. ಇದಕ್ಕಾಗಿ ನೀವು ಸ್ವಲ್ಪ ಕಹಿಯಾಗಿರುವಂತಹ ಮೆಂತೆನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕರಿಸುವುದು ಮತ್ತು ವಿಷಕಾರಿ ಅಂಶವನ್ನು ಹೊರಹಾಕುವ ಮೂಲಕ ಕಾಂತಿಯುತ, ಆರೋಗ್ಯಕಾರಿ ಮತ್ತು ಕಲೆಯಿಲ್ಲದೆ ಇರುವ ಚರ್ಮವನ್ನು ನೀಡುವುದು. ಮೆಂತೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸಂಧಿವಾತ, ದೀರ್ಘಕಾಲದ ಕೆಮ್ಮು, ಬಾಯಿಯ ಹುಣ್ಣು ಇತ್ಯಾದಿಗಳನ್ನು ನಿವಾರಿಸುವುದು.