ಬ್ರಿಟನ್: ಆಂಬುಲೆನ್ಸ್ಗೆ ವಾಹನ ಚಾಲಕರು ದಾರಿ ಮಾಡಿಕೊಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ನಲ್ಲಿದೆ. ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ಗೆ ಚಾಲಕರೆಲ್ಲ ಒಗ್ಗಟ್ಟಾಗಿ ದಾರಿಮಾಡಿಕೊಟ್ಟಿದ್ದಾರೆ.
ಬ್ರಾಕ್‌ನೆಲ್‌ನಲ್ಲಿ ನಡೆದ ಹೃದಯಸ್ಪರ್ಶಿ ಘಟನೆ ಇದು. ತುರ್ತು ಕರೆಯನ್ನು ಸ್ವೀಕರಿಸಿ ಸಾಗುತ್ತಿದ್ದ ಆಂಬ್ಯುಲೆನ್ಸ್ ಅದೊಂದು ಕಡೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು. ಆಂಬ್ಯುಲೆನ್ಸ್ ಸಿಗ್ನಲ್‌ನಲ್ಲಿ ನಿಂತಿರುವುದನ್ನು ಇತರ ಕಾರು ಚಾಲಕರು ಗಮನಿಸಿದ್ದರು.
ತಕ್ಷಣ ಈ ಚಾಲಕರು ಒಗ್ಗಟ್ಟಾಗಿ ಕಾರಿನಿಂದ ಇಳಿದು ರಸ್ತೆಯ ಬದಿಯಲ್ಲಿ ಇರಿಸಿದ್ದ ಟ್ರಾಫಿಕ್ ಕೋನ್ ಸೇರಿದಂತೆ ಎಲ್ಲಾ ಅಡೆತಡೆಗಳನ್ನು ಸ್ವಯಂಪ್ರೇರಿತರಾಗಿ ತೆಗೆದು ಆಂಬ್ಯುಲೆನ್ಸ್ ಸಾಗುವುದಕ್ಕೆ ಅನುವು ಮಾಡಿಕೊಟ್ಟಿದ್ದರು.
ಈ ದೃಶ್ಯ ಆಂಬ್ಯುಲೆನ್ಸ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಈ ವಿಡಿಯೋ ಇದೀಗ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಜಗತ್ತಿನಲ್ಲಿ ಇನ್ನೂ ಮಾವೀಯತೆ ನೆಲೆಸಿದೆ. ಒಳ್ಳೆಯ ಜನರೂ ನಮ್ಮ ನಡುವೆ ನೆಲೆಸಿದ್ದಾರೆ ಎಂದು ನೆಟ್ಟಿಗರು ಈ ವಿಡಿಯೋ ನೋಡಿದ ಬಳಿಕ ಕೊಂಡಾಡಿದ್ದಾರೆ.