ರಾಜ್ಯ ಸರಕಾರ ದಿಢೀರನೆ ವ್ಯಾಪಾರ-ವಹಿವಾಟು ನಿಷೇಧಿಸಿದ್ದರಿಂದ ಬೆಳೆದಿದ್ದ ಹೂ ಮಾರಲು ಆಗದೇ ಇದ್ದಿದ್ದಕ್ಕೆ ರೈತ ಹೂವನ್ನು ತಹಸೀಲ್ದಾರ್ ಕಚೇರಿ ಮುಂದೆ ಸುರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಹಶೀಲ್ದಾರ್ ಕಚೇರಿ ಮುಂದೆ ರೈತ ತಾನು ಬೆಳೆದಿದ್ದ ಚೆಂಡು ಹೂವಿನ ರಾಶಿಯನ್ನು ತಂದು ಸುರಿದಿದ್ದಾನೆ.
ಏಕಾಏಕಿ ಮಾರುಕಟ್ಟೆ ಬಂದ್ ಮಾಡಿದರೆ ನಾವು ಬದುಕುವುದಾದರೂ ಹೇಗೆ? ರೈತರ ಮನೆ ಮುರಿಯುವ ಕೆಲಸವನ್ನು ಮಾಡುತ್ತಿದೆ ಎಂದು ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ ರೈತ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ದಂದಾಪುರ ರೈತ ದಿಢೀರನೆ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು ನಿರ್ಬಂಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಅಧಿಕಾರಿಗಳಿಗೆ ತಿಂಗಳು ತಿಂಗಳು ಪಗಾರ ಪಡೆಯುತ್ತಾರೆ. ಆದರೆ ನಮಗೆ ಬೆಳೆ ಬೆಳೆದು ಮಾರಿದಾಗಲೇ ದುಡ್ಡು ಎಂದು ಹೇಳಿದರು.