ನಾರ್ವೆಯ ಪರ್ವತಾರೋಹಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ನಲ್ಲಿ ಮೊದಲ ಬಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ನಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿದ್ದು, ಕೂಡಲೇ ಹೆಲಿಕಾಫ್ಟರ್ ಮೂಲಕ ನೇಪಾಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾರ್ವೆಯ ಪರ್ವತಾರೋಹಿ ಎರ್ಲೆಂಡ್ ನೆಸ್ ಈ ವಿಷಯ ತಿಳಿಸಿದ್ದು, ಏಪ್ರಿಲ್ 15ರಂದು ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಕುಟುಂಬದ ನೆರವಿನೊಂದಿಗೆ ನೆಲೆಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಮೌಂಟ್ ಎವರೆಸ್ಟ್ ಗೈಡ್ ಆಗಿರುವ ಆಸ್ಟ್ರೇಲಿಯಾದ ಲುಕಾಸ್ ಫರ್ಟೆನ್ ಬಚ್, ಮೌಂಟ್ ಎವರೆಸ್ಟ್ ಬಳಿ ಇರುವ ಎಲ್ಲಾ ತರಬೇತುದಾರರು, ಪರ್ವತಾರೋಹಿಗಳು ಸೇರಿದಂತೆ ಎಲ್ಲರಿಗೂ ಸಾಮೂಜಹಿಕ ಕೋವಿಡ್ ಪರೀಕ್ಷೆ ಮಾಡಿ ಸುರಕ್ಷತೆ ಕಾಪಾಡುವಂತೆ ಮನವಿ ಮಾಡಿದ್ದಾರೆ.