ನವದೆಹಲಿ: ಶಿವಮೊಗ್ಗದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಹಿಂದೂ ಮಹಾಸಭಾ ಗಣಪತಿ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಆದ್ರೆ ಈದ್ ಮಿಲಾದ್ ಜಾಥಾದಲ್ಲಿ ಶಾಂತಿಕದಡಲು ಪ್ರಯತ್ನಿಸಲಾಗಿದೆ. ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಶಿವಮೊಗ್ಗದಲ್ಲಿ ಹತ್ತಿರುವ ಕಿಡಿ ರಾಜ್ಯಕ್ಕೆ ಹಬ್ಬಿದರೂ ಆಶ್ಚರ್ಯವಿಲ್ಲ ಎಂದರು.
ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ರ್ಯಾಲಿಗೆ ಪೊಲೀಸರು ಉತ್ತಮ ಭದ್ರತೆ ನೀಡಿದ್ದರು. ಇದರ ನಡುವೆಯೂ ಶಾಂತಿ ಕದಡುವ ಕೆಲಸ ನಡೆದಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಇಲ್ಲವಾದರೆ ಶಾಂತಿ ಕದಡುವುದಕ್ಕೆ ಕುಮ್ಮಕ್ಕು ಕೊಟ್ಟ ಹಾಗೆ ಆಗುತ್ತದೆ ಎಂದರು.