ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಜೆಟ್ ಲಾಗ್ ಅವಧಿ ಮೀರಿ ಪಾರ್ಟಿ ಮಾಡಿರುವ ಪ್ರಕರಣ ಸಂಬಂಧಿಸಿ ನಟ ದರ್ಶನ್ ಇಂದು 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈ ಕಾಫಿ ರಾಜ್ ನ್ಯೂಸ್ಗೆ ಲಭ್ಯವಾಗಿದೆ.
ಕಳೆದ 3 ತಾರೀಕು ರಾತ್ರಿ ಮೂರು ಗಂಟೆಯವರೆಗೂ ನೀವೂ ಜೆಟ್ ಲಾಗ್ನಲ್ಲಿರುವುದು ತಿಳಿದು ಬಂದಿದೆ. ಈ ಪ್ರಕರಣದ ಮುಂದಿನ ತನಿಖೆಗಾಗಿ ನಿಮ್ಮ ಹೇಳಿಕೆ ಪಡೆಯಬೇಕು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಜೊತೆಗೆ ನೋಟಿಸ್ನಲ್ಲಿ ಪಬ್ ನಿಯಮ ಉಲ್ಲಂಘನೆ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.