ಬೆಂಗಳೂರು : ಹೊಸ ವರ್ಷಕ್ಕೆ ಇನ್ನೂ 15 ದಿನ ಬಾಕಿ ಇರುವಾಗಲೇ ಇಂದು ಹಲವು ಇಲಾಖೆಗಳೊಂದಿಗೆ ಪೊಲೀಸ್ ಇಲಾಖೆ ಮೀಟಿಂಗ್ ನಡೆಸಿದೆ.ಹೊಸವರ್ಷಾಚರಣೆಯ ಮಾರ್ಗಸೂಚಿ ತಯಾರಿಗಾಗಿ ವಿವಿಧ ಇಲಾಖೆಗಳ ಜೊತೆ ಇಂದು ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಕಮಿಷನರ್ ಬಿ ದಯಾನಂದ್, ನಗರದ ಎಲ್ಲಾ ಡಿಸಿಪಿಗಳು ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ಜಂಟಿ ಆಯುಕ್ತರು ಭಾಗಿಯಾಗಿದ್ದು, ಸಭೆಯಲ್ಲಿ, ಬಿಬಿಎಂಪಿ, ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಬೆಸ್ಕಾಂ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಭೆ ಬಳಿಕ ಮಾರ್ಗಸೂಚಿಗಳ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ. ಈ ಬಾರಿಯ ಹೊಸ ವರ್ಷಾಚರಣೆ ಹೊಸ ಹೊಸ ಮಾರ್ಗ ಸೂಚಿಗಳನ್ನ ನೀಡಲಿದ್ದಾರೆ. ಇತ್ತೀಚೆಗೆ ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಗಳಲ್ಲೂ ಕಾರ್ಟೂನ್ ಮಾಸ್ಕ್ ಗೆ ಕಡಿವಾಣ ಹಾಕಲಾಗಿದೆ.ಕಾರ್ಟೂನ್ ಕಂಪ್ಲಿಟ್ ಬ್ಯಾನ್ ಮಾಡಲು ಚಿಂತನೆ ನಡೆದಿದೆ.
ಜೊತೆಗೆ ಇಡೀ ರಾತ್ರಿ ಪವರ್ ಕಟ್ ಆಗದ ರೀತಿ ಬೆಸ್ಕಾಂಗೆ ಮನವಿ ಮಾಡಲಾಗಿದೆ. ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಕಠಿಣ ಮಾರ್ಗಸೂಚಿ ನೀಡಲು ನಿರ್ಧಾರ ಮಾಡಿದೆ. ಕಪಲ್ಸ್ ಗಳಿಗೆ ಪ್ರತ್ಯೇಕ ಮಾರ್ಗ ನಿರ್ಮಾಣದ ನಿರ್ಧಾರ ಮಾಡಿದ್ದು, ಎಂದಿನಂತೆ ಈ ಬಾರಿಯೂ ಮುಂಜಾಗ್ರತಾ ಕ್ರಮ ಪೊಲೀಸ್ ಇಲಾಖೆ ತೆಗೆದುಕೊಂಡಿದೆ.