ಬೆಂಗಳೂರು : 1992ರ ಕರಸೇವೆ ಗಲಭೆ ಪ್ರಕರಣವೊಂದರಲ್ಲಿ ಪಾಲ್ಗೊಂಡ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯನ್ನು ಬಂಧಿಸಿರುವ ಪ್ರಕರಣ ಸಂಬಂಧಿಸಿ ವಿಪಕ್ಷ ನಾಯಕ ಆರ್. ಆಶೋಕ್ ಸಿಡಿದೆದಿದ್ದು, ಕರ “ಸೇವೆಯಲ್ಲಿ ನಾನು ಭಾಗಿಯಾಗಿದ್ದೇ, ತಾಕತ್ ಇದ್ರೆ ಬಂಧಿಸಿ ” ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧಆಗ್ರಹಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಇಂದು ವಿಪಕ್ಷ ನಾಯಕ ಆರ್. ಆಶೋಕ್ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, “ನಾನು ಕೂಡ ಕರ ಸೇವೆಯಲ್ಲಿಭಾಗಿಯಾಗಿದ್ದೆ, ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕರಾಳ ಛಾಯೆ ಬೀರಿದೆ. ಎಲ್ಲೆಲ್ಲಿಕರ ಸೇವಕರು ಇದ್ದಾರೆ ಅವರನ್ನ ಬಂಧಿಸುತ್ತಿದ್ದಾರೆ. ಚಿಕ್ಕಮಗಳೂರು ಸೇರಿ ಹಲವೆಡೆ ಬಂಧಿಸುತ್ತಿದ್ದಾರೆ. ರಾಜ್ಯದಲ್ಲಿ ಎಮರ್ಜೆನ್ಸಿ ಪರಿಸ್ಥಿತಿ ನಿರ್ಮಾಣ ಆಗಿದೆ. ರಾಮಮಂದಿರ ಉದ್ಘಾಟನೆ, ರಾಮಭಕ್ತರಿಂದ ಸರ್ಕಾರದ ತಲೆಕೆಟ್ಡಿದೆ. ಇದ್ರಿಂದ ಬಂಧಿಸುವ ಕೆಲಸ ಮಾಡ್ತಿದೆ. ತಾಕತ್ ಇದ್ರೆ ಬಂಧಿಸಿ ನೋಡೋಣ.. ಯಡಿಯೂರಪ್ಪ, ರವಿಕುಮಾರ್ ಕೂಡ ಕರಸೇವಕರು ಎಂದು ಕಿಡಿಕಾರಿದ್ದಾರೆ