ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಸೇರಿದಂತೆ ಹಲವು ಸೆಂಟ್ರಲ್ ಮಿನಿಸ್ಟರ್ ಗಳ ಹೆಸರು ಬಳಸಿಕೊಂಡು ಮಠಗಳಿಗೆ, ಉದ್ಯಮಿಗಳಿಗೆ ವಂಚನೆ ಮಾಡುತ್ತಿದ್ದ ಮಹಾ ವಂಚಕನೊಬ್ಬನನ್ನು ಮಹಾಲಕ್ಷ್ಮಿ ಲೇ ಔಟ್ ಪೊಲೀಸರು ಬಂಧನ ಮಾಡಿದ್ದಾರೆ.
ಸಂತೋಷ್ ಬಂಧಿತ ಆರೋಪಿ. ಇಂಜಿನಿಯರಿಂಗ್ ಪದವೀಧರನಾಗಿದ್ದ ಸಂತೋಷ್. ಆರೋಪಿ ಸಂತೋಷ್ ತನಗೆ ದೊಡ್ಡ ದೊಡ್ಡವರ ಪರಿಚಯವಿದೆ ಎಂದು ನಂಬಿಸಿ ಹಲವು ಹೂಡಿಕೆದಾರರೊಂದಿಗೆ ಸ್ನೇಹ ಬೆಳೆಸಿದ್ದನು. ನನಗೆ ರಾಜ್ಯ ಹಾಗೂ ಕೇಂದ್ರ ಸಚಿವರು ಗೊತ್ತು ಎಂದು ಬಿಸಿನೆಸ್ ಮ್ಯಾನ್ಗಳಿಗೆ ನಂಬಿಸುತ್ತಿದ್ದ.
ಬಳಿಕ ಪಿಎಂ, ಸಿಎಂ ಕಛೇರಿಯಿಂದ ಉದ್ಯಮಿಗಳಿಗೆ ಫೇಕ್ ಕಾಲ್ ಮಾಡ್ತಿದ್ದ. ಈತನೇ ಕಾಲ್ ಮಾಡಿ ಪಿಎಂ ಕಛೇರಿಯಿಂದ ಮಾತನಾಡುತ್ತಿದ್ದೇವೆ ಎಂದು ನಂಬಿಸುತ್ತಿದ್ದ. ಇದನ್ನ ನಂಬಿ ಸಂತೋಷ್ ಹೇಳಿದಂತೆ ಉದ್ಯಮಿಗಳು ಕೇಳುತ್ತಿದ್ದರು. ಆತನ ಜೊತೆಗೂಡಿ ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಿದ್ದರು.
ಹಣ ಹೂಡಿಕೆ ಮಾಡುತ್ತಿದ್ದಂತೆ ಕಂಪನಿಯ ಹಣವನ್ನ ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡು ಆರೋಪಿ ಸಂತೋಷ್ ವಂಚನೆ ಮಾಡುತ್ತಿದ್ದ.ಇಷ್ಟೇ ಅಲ್ಲದೆ ಮಠ, ಪ್ರಸಿದ್ಧ ದೇವಸ್ಥಾಗಳಲ್ಲೂ ಇದೇ ರೀತಿ ಹೇಳಿಕೊಂಡು ವಂಚನೆ ಮಾಡಿದ್ದಾನೆ.
ಸುಳ್ಳನ್ನೇ ಬಂಡವಾಳ ಮಾಡಿಕೊಂಡು ವೇದಿಕೆಗಳಲ್ಲಿ ಸನ್ಮಾನ ಮಾಡಿಸಿಕೊಂಡು ಕೋಟ್ಯಾಧಿಪತಿಯಾಗಿದ್ದ ಸಂತೋಷ್ ಸದ್ಯ ಅರೆಸ್ಟ್ ಆಗಿದ್ದಾರೆ. ಗಣ್ಯರ ಜೊತೆಗಿನ ಫೋಟೋಗಳನ್ನ ನೋಡಿ ನಂಬಿ ಸ್ಟಾರ್ಟ್ ಅಪ್ ಕಂಪನಿಗೆ ಹಣ ಹೂಡುತ್ತಿದ್ದ ಹೂಡಿಕೆದಾರರಿಗೆ ಸಂತೋಷ್ನ ಅಸಲಿ ಮುಖದ ತಿಳಿಯುತ್ತಿದ್ದಂತೆ ಈತನ ವಿರುದ್ಧ ಕೇಸ್ ದಾಖಲಿಸಿದ್ದಾರೆ ಬಳಿಕ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಯನ್ನ ಬಂಧನ ಮಾಡಿ ವಿಚಾರಣೆ ಮಾಡಿದ ಈ ವಿಚಾರಗಳು ಬೆಳಕಿಗೆ ಬಂದಿದೆ.