ಧಾರವಾಡ : ಅಂಗವೈಕಲ್ಯತೆ ಇದ್ದರೂ ಛಲದಿಂದ ಜೀವನ ಸಾಗಿಸುತ್ತಿರುವ ಪ್ರತಿಭಾವಂತ ವಿಶೇಷ ಚೇತನ ವಿದ್ಯಾರ್ಥಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ತ್ರಿಚಕ್ರ ವಾಹನವನ್ನು ನೀಡುವುದಾಗಿ ಅಭಯಹಸ್ತ ನೀಡಿದ್ದಾರೆ.
ಸಚಿವ ಲಾಡ್ ಅವರಿಗೆ ಸಂಕಷ್ಟ ಎಂದು ಹೇಳಿಕೊಂಡು ಬರುವ ಜನರ ಪಾಲಿಗೆ ಸದಾ ಸ್ಪಂದಿಸುವ ವ್ಯಕ್ತಿ ಅಂದ್ರೆ ಲಾಡ್, ಧಾರವಾಡದ ಸರ್ಕಿಟ್ ಹೌಸ್ ಗೆ ರಾತ್ರಿ ತನ್ನ ಸ್ನೇಹಿತರ ಜೊತೆ ಬಂದಿದ್ದ ಸಿದ್ದಪ್ಪ ಎಂಬ ಈ ಯುವಕ ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿ.
ಸದ್ಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದು. ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ್ ಕಲಾಲ್ ಅವರಿಗೆ ಫೋನ್ ಮಾಡಿ ಈ ಯುವಕನಿಗೆ ತ್ರಿಚಕ್ರ ವಾಹನ ಮತ್ತು 25,000 ರೂಪಾಯಿಯ ಆರ್ಥಿಕ ಸಹಾಯವನ್ನು ಮಾಡಲು ಹೇಳಿ ಸಂತೋಷ್ ಲಾಡ್ ಅವರು ಮತ್ತೊಮ್ಮೆ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.
ಅಷ್ಟೇ ಅಲ್ಲದೇ ಸಿದ್ದಪ್ಪನ ಜೊತೆ ಕುಟುಂಬದ ಬಗ್ಗೆ ವಿಚಾರಿಸಿ, ಲಘು ಹಾಸ್ಯ ಮಾಡುತ್ತ, ಅವರೆಲ್ಲರೊಂದಿಗೆ ಬೆರೆಯುವ ಸಂತೋಷ್ ಲಾಡ್ ಅವರ ಗುಣ ನಾಡಿನ ಜನರ ಮನಸ್ಸು ಗೆದ್ದಿದೆ…