ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ವೇಳೆ ನಡು ರಸ್ತೆಯಲ್ಲಿ ಗಾಂಜಾ ಸೇವನೆ, ಮದ್ಯಸೇವನೆ ಮಾಡಿ ಅಟ್ಡಹಾಸ ಮೆರೆಯುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪ ಕೇಳಿ ಬರುತ್ತಿದೆ. ಈ ರೌಡಿಗಳನ್ನ ಕಂಟ್ರೋಲ್ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗ್ತಿದ್ಯಾ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ.
ಪುಡಿ ರೌಡಿಗಳ ಹಾವಳಿಯಿಂದ ಸಿಟಿಯಲ್ಲಿ ಓಡಾಡುವ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಟಾರ್ಚರ್ ಹೆಚ್ಚಾಗುತ್ತಿದೆ. ಈ ರೌಡಿಗಳ ಪುಂಡಾಟದಿಂದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜಪುರಂ ಸಾಯಿತ್ ಪಾಳ್ಯದಲ್ಲಿ ಎರಡು ವಾಹನಗಳಿಗೆ ಡ್ಯಾಮೇಜ್ ಮಾಡಲಾಗಿದೆ.
ಈ ಹಿನ್ನಲೆ ಪುಡಿ ರೌಡಿಗಳನ್ನು ಇವರ ಹೆಡೆಮುರಿ ಕಟ್ಟುವಂತೆ ಪೊಲೀಸರಿಗೆ ಸಾರ್ವಜನಿಕರ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೌಡಿಗಳ ಅಟ್ಟಹಾಸವನ್ನು ಇನ್ನಾದ್ರೂ ಎಚ್ಚೆತ್ತುಕೊಂಡು ಕಡಿವಾಣ ಬಾಣಸವಾಡಿ ಪೊಲೀಸರು ಹಾಕ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.