ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (NIRMALA SEETHARAMAN) ಅವರ 2023-24ನೇ ಸಾಲಿನ ಕೇಂದ್ರ ಬಜೆಟ್ ಗೆ ವೇದಿಕೆ ಸಿದ್ಧವಾಗಿದೆ. ಸಂಸತ್ (SAMSATH) ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆಯುವ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿರುವುದರಿಂದ ಜನರು ಬಹು ನೀರಿಕ್ಷೆಗಳನ್ನು ಹೊಂದಿದ್ದಾರೆ.
#WATCH | Finance Minister Nirmala Sitharaman with her team at Parliament, to deliver her fifth #Budget today pic.twitter.com/kauGclIcgb
— ANI (@ANI) February 1, 2023
ಬಜೆಟ್ಗೆ ಮೊದಲು ದೇವರಪೂಜೆ
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ ಭಾಗವತ್ ಕೃಷ್ಣರಾವ್ ಕರಡ್ ಅವರು ಬಜೆಟ್ ಮಂಡನೆಗೆ ಮೊದಲು ತಮ್ಮ ಸ್ವಗೃಹದಲ್ಲಿ ತಿರುಪತಿ ವೆಂಕಟರಮಣಸ್ವಾಮಿಗೆ ಪೂಜೆ ನೆರವೇರಿಸಿದರು. ಬಜೆಟ್ ಮಂಡನೆ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿದರು. ಇದನ್ನು ಓದಿ :- ಸಿದ್ದರಾಮಯ್ಯ ನೂರು ವರ್ಷ ಬದುಕಿರಲಿ ಅವರು ಹೆಣವಾಗಿ ಬರುವುದು ಬೇಡ – ಸಿ.ಟಿ.ರವಿ ವ್ಯಂಗ್ಯ
#WATCH | Union Minister of Finance and Corporate Affairs Nirmala Sitharaman, MoS Dr Bhagwat Kishanrao Karad, MoS Pankaj Chaudhary and senior officials of the Ministry of Finance called on President Droupadi Murmu at Rashtrapati Bhavan before presenting the #UnionBudget2023, today pic.twitter.com/f3XjyQh46v
— ANI (@ANI) February 1, 2023
ಕೆಂಪು ಸೀರೆ ಉಟ್ಟು ಬಜೆಟ್ ದಾಖಲೆ ತೋರಿಸಿದ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಿಗ್ಗೆ 9 ಗಂಟೆಗೆ ಹಣಕಾಸು ಸಚಿವಾಲಯದಿಂದ ಬಜೆಟ್ ದಾಖಲೆಯನ್ನು ಸ್ವೀಕರಿಸಿ ಸಂಸತ್ತಿನತ್ತ ಹೊರಟರು. ಪ್ರತಿವರ್ಷದಂತೆ ಈ ವರ್ಷವೂ ಅವರು ಉಟ್ಟಿರುವ ಸೀರೆ ಮಾಧ್ಯಮಗಳ ಗಮನ ಸೆಳೆದಿದೆ. ಬಜೆಟ್ ದಾಖಲೆ ಇರುವ ಟ್ಯಾಬ್ಲೆಟ್ಗೆ ಸುತ್ತಿರುವ ಕೆಂಪು ಹೊದಿಕೆಗೆ ಹೊಂದಾಣಿಕೆಯಾಗುವ (ಮ್ಯಾಚಿಂಗ್) ಬಣ್ಣದ ಸೀರೆಯನ್ನು ನಿರ್ಮಲಾ ಉಟ್ಟಿದ್ದಾರೆ. ಕೆಂಪು ಬಣ್ಣಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ.
#WATCH | Union Finance Minister Nirmala Sitharaman will present the #UnionBudget2023 in the Parliament at 11 am pic.twitter.com/vLq9AAGQHJ
— ANI (@ANI) February 1, 2023
ಜಾಗತಿಕ ಸವಾಲುಗಳು ಹೆಚ್ಚಾಗಿರುವ, ಆರ್ಥಿಕತೆಯಲ್ಲಿ ಆತಂಕ ಮನೆಮಾಡಿರುವ ಹೊತ್ತಿನಲ್ಲಿ ಮಂಡನೆಯಾಗುತ್ತಿರುವ ಭಾರೀ ಸವಾಲಿನ ಬಜೆಟ್ ಇದು. ಹೀಗಾಗಿಯೇ ದೇಶಕ್ಕೆ ಜನಮಾನಸಕ್ಕೆ ಭರವಸೆ ತುಂಬಲೆಂದು ನಿರ್ಮಲಾ ಅವರು ಈ ಬಣ್ಣದ ಸೀರೆ ಆರಿಸಿಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇಂದು ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಬಂದ ನಿರ್ಮಲಾ ಸೀತಾರಾಮನ್, ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಜೊತೆ ರಾಜ್ಯಖಾತೆ ಸಚಿವರಾದ ಪಂಕಜ್ ಚೌಧರಿ ಮತ್ತು ಭಗವತ್ ಕರಾಡ್ ಹಾಗು ಹಣಕಾಸು ಇಲಾಖೆ ಕಾರ್ಯದರ್ಶಿಗಳು ರಾಷ್ಟ್ರಪತಿಗಳ ಭೇಟಿ ವೇಳೆ ಇದ್ದರು.
ಇದನ್ನು ಓದಿ :- ನೈಜೀರಿಯನ್ ಡ್ರಗ್ ಪೆಡ್ಲರ್ ಜೊತೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಲಿಂಕ್…!?