ತುಮಕೂರು ; ಚಿನ್ನ ಖರೀದಿಸುವ ನೆಪದಲ್ಲಿ ತಾಯಿ- ಮಗಳ ಜ್ಯುವೆಲ್ಲರಿ ಶಾಪ್ ಬಂದು 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ತುಮಕೂರು ಜಿಲ್ಲೆಯ ಗುಂಚಿ ಸರ್ಕಲ್ ಬಳಿಯ ಎಸ್.ಎನ್ ಡಿ ಜ್ಯುವೆಲ್ಲರಿ ಶಾಪ್ನಲ್ಲಿ ನಡೆದಿದೆ.
ತಾಯಿ- ಮಗಳ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್ಗೆ ಬಂದು ಚಿನ್ನದ ಸರ ಖರೀದಿ ಮಾಡುವುದಾಗಿ ಚಿನ್ನದ ಸರಗಳ ವೀಕ್ಷಣೆ ಮಾಡುತ್ತಿದ್ದರು. ಮಾತಿನ ಮೂಲಕ ಜ್ಯುವೆಲ್ಲರಿ ಶಾಪ್ ಮಾಲೀಕನ ಗಮನವನ್ನು ಇವರಿಬ್ಬರು ಬೇರೆಡೆ ಸೆಳೆದು ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಎಸ್ಕೇಪ್ ಆಗಿದ್ದಾರೆ. ಕೆಲ ಗಂಟೆಗಳ ಬಳಿಕ ಚಿನ್ನದ ಸರವನ್ನ ಪರಿಶೀಲನೆ ನಡೆಸಿದಾಗ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಖತರ್ನಾಕ್ ಕಳ್ಳರ ಕೈಚಳಕದ ವಿಡಿಯೋ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಳಿಕ ಸರ ಕದ್ದು ಪರಾರಿಯಾದ ಮಹಿಳೆಯರ ವಿರುದ್ಧ ಜ್ಯುವೆಲ್ಲರಿ ಶಾಪ್ ಮಾಲೀಕ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಕಳೆದ ಡಿಸೆಂಬರ್ 2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ತುಮಕೂರು ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಕಳ್ಳರಿಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ.