ರಾಮನಗರ : ತುತ್ತು ಅನ್ನಕ್ಕೆ ಬಂದವರು ಅವರು..ಅಂದಿನ ದುಡಿಮೆಯೇ ಅವರಿಗೆ ಕೋಟಿಗೆ ಸಮಾನ..ತಾಯಿ ತಂದೆ ಅಥವಾ ಹೆಂಡತಿ ಮಕ್ಕಳನ್ನು ತೊರೆದು ಅಥವಾ ಅವರೊಂದಿಗೆಯೇ ಜೀವನ ದಾರಿ ಕಂಡುಕೊಳ್ಳಲು ಬಂದಿದ್ದರು. ಅದ್ರೆ ಆ ವಿಧಿ ಇಂತಹವರ ಗುಂಪಿನಲ್ಲಿ ಹುಡುಕಿ ಮೂವರನ್ನು ತನ್ನತ್ತ ಸೆಳೆದುಕೊಂಡಿದೆ. ವಿಧಿ ಬಲಿತೆಗೆದುಕೊಂಡದ್ದು ಜೆಸಿಬಿ ರೂಪದಲ್ಲಿ ಎಂಬುದು ದೊಡ್ಡ ಮತ್ತೊಂದು ದುರಂತ ಇಂತಹದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದರುವುದು ರಾಮನಗರದ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ.
ಜಮೀನಿನಲ್ಲಿ ಕಾಲು ದಾರಿಯಲ್ಲಿ ಅವರು ಗಾಢ ನಿದ್ರೆಗೆ ಜಾರಿದ್ದರು. ಆ ವೇಳೆ ಒಂದಷ್ಟು ಸದ್ದಿಲ್ಲದೇ ಯಮ ರೂಪದಲ್ಲಿ ಬಂದ ಜೆಸಿಬಿ ಮಲಗಿದ್ದವರ ಮೇಲೆ ಹಾಗೆಯೇ ಚಲಿಸಿಬಿಟ್ಟಿತ್ತು ನೋಡನೋಡುತ್ತಿದ್ದಂತೆ ಅಕ್ಕಪಕ್ಕ ರಕ್ತ ಚಿಮ್ಮಿತ್ತು ಮಾಂಸಗಳು ಅಲ್ಲಲ್ಲೇ ಬಿದ್ದಿತ್ತು. ಮಲಗಿದ್ದವರು ಮತ್ತೆ ಏಳುವ ಪ್ರಶ್ನೆಯೇ ಇರಲಿಲ್ಲ. ಈ ದುರ್ಘಟನೆಯಲ್ಲಿ ಸತ್ತವರು ಛತ್ತೀಸ್ಗಢ ಮೂಲದವರಾದ ವಿಷ್ಣು(26), ಶಿವರಾಮ್(28), ಬಲರಾಮ್(30) ಎಂಬ ಕಾರ್ಮಿಕರು.
ಜಮೀನಿನಲ್ಲಿ ಬೋರ್ ವೆಲ್ ಕೊರೆಯುವ ಕೆಲಸಕ್ಕೆಂದು ಬಂದಿದ್ದ ಗುಂಪಿನಲ್ಲಿ ಇದ್ದವರು ಈ ಮೂವರು ಕೆಲಸ ಮುಗಿಸಿ, ಒಂದಿಷ್ಟು ವಿರಮಿಸಿಕೊಳ್ಳೋಣ ಎಂದು ಕಾಲುದಾರಿಯಲ್ಲಿ ಮಲಗಿದ್ದರು. ಅವರ ಪಾಲಿಗೆ ಆ ಕಾಲು ದಾರಿ ಮಸಣದ ದಾರಿಯನ್ನು ತೋರಿಸಿಬಿಟ್ಟಿತ್ತು. ಇಲ್ಲಿ ಯಾರ ಅಜಾಗರುಕತೆ ಅಥವಾ ಯಾರ ನಿರ್ಲಕ್ಷ್ಯವೋ ಶಿಕ್ಷೆ ಆಗಬಹುದು ಆದ್ರೆ ಇವರನ್ನೆ ನಂಬಿಕೊಂಡಿದ್ದ ಈ ಜೀವಗಳು ಮತ್ತೆ ಬದುಕಿ ಬಂದಾವ….?