ಅಬ್ಬಾಬ್ಬ ಈ ಜಗತ್ತಿನಲ್ಲಿ ಎಂತ ಹುಚ್ಚರಿದ್ದಾರೆ ಗೊತ್ತಾ..? ಸುಂದರವಾಗಿ ಕಾಣಬೇಕು ಎಂದು ತರಹೇವಾರಿ ಚಿಕಿತ್ಸೆಗಳು, ಸರ್ಜರಿಗಳಿಗೆ ಒಳಗಾಗುವ ಜನರನ್ನು ನೋಡಿದ್ದೇವೆ.
ಸೆಲೆಬ್ರಿಟಿಗಳು ಮೂಗು, ತುಟಿ, ಕೆನ್ನೆ ಅಲ್ಲದೆ, ಇತರೆ ಅವಯವಗಳ ಗಾತ್ರ ಬದಲಿಸಿಕೊಳ್ಳುವುದು ಸರ್ವೇಸಾಮಾನ್ಯ. ಸೆಲೆಬ್ರಿಟಿಗಳಂತೆ ಕಾಣಲು ಅಥವಾ ‘ಗೊಂಬೆ’ಯಂತೆ ಕಾಣಲು ಲಕ್ಷಾಂತರ ರೂಪಾಯಿ ಹಣ ಸುರಿಯುವವರಿದ್ದಾರೆ. ಆದರೆ, ಜಪಾನ್ನ ವ್ಯಕ್ತಿಯೊಬ್ಬ ಜಗತ್ತಿನಲ್ಲಿಯೇ ಅತ್ಯಂತ ವಿಚಿತ್ರಗಳಲ್ಲಿ ಒಂದಾದ ಕನಸನ್ನು ಇತ್ತೀಚೆಗೆ ಈಡೇರಿಸಿಕೊಂಡಿದ್ದಾನೆ. ಆತನ ಜೀವಮಾನದ ಬಯಕೆಯೆಂದರೆ ತಾನು ಪ್ರಾಣಿಯಂತೆ ಕಾಣಬೇಕು ಎನ್ನುವುದು. ಆತನ ಆಸೆ ಈಡೇರಿದೆ. ಈಗ ನೋಡಲು ಆತ ಥೇಟು ನಾಯಿಯಂತೆ ಕಾಣಿಸುತ್ತಾನೆ. ಅದಕ್ಕಾಗಿ ಆತ 2 ಮಿಲಿಯನ್ ಯೆನ್ ಅಂದರೆ 12 ಲಕ್ಷ ರೂಪಾಯಿ ವ್ಯಯಿಸಿದ್ದಾನೆ. ಝೆಪ್ಪೆಟ್ (Zeppet) ಎಂಬ ಪ್ರಸಿದ್ಧ ವೃತ್ತಿಪರ ಸಂಸ್ಥೆ ಈ ವ್ಯಕ್ತಿಯ ವಿಚಿತ್ರ ಬಯಕೆಯನ್ನು ಈಡೇರಿಸಿದೆ. ಇದನ್ನೂ ಓದಿ : – ರಾಜ್ಯಸಭೆಗೆ ಯುಪಿಯಿಂದ ನಿರ್ಮಲಾ ಸೀತಾರಾಮನ್ ಸ್ಫರ್ಧೆ – ರಾಜ್ಯದಿಂದ ತೇಜಸ್ವಿನಿ ಅನಂತ್ ಕುಮಾರ್ ಗೆ ಸಿಗುತ್ತಾ ಟಿಕೆಟ್ ?
ಇದನ್ನು ತಯಾರಿಸಲು ಕಂಪೆನಿ ಸುಮಾರು 40 ದಿನ ತೆಗೆದುಕೊಂಡಿದೆ. ಇದು ನಾಯಿಯಂತೆ ಹೋಲುವ ಕ್ಯಾಸ್ಟ್ಯೂಮ್ ಆಗಿದ್ದು, ಅದನ್ನು ಧರಿಸಿ ಟೋಕೊ ಶ್ವಾನದ ರೂಪ ಪಡೆದುಕೊಳ್ಳುತ್ತಾನೆ. ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಟೋಕೊ, ನಾಯಿಯ ದಿರಿಸಿನಲ್ಲಿ ತನ್ನ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ತನ್ನ ಕಾಲುಗಳನ್ನು ಎತ್ತುವ, ಹೊರಳಾಡುವಂತಹ ನಾಯಿಯ ಸಾಮಾನ್ಯ ವರ್ತನೆಗಳನ್ನು ಅದರಲ್ಲಿ ತೋರಿಸಿದ್ದಾನೆ.
ಇದನ್ನೂ ಓದಿ : – ಜ್ಞಾನವಾಪಿ ಮಸೀದಿ ವಿವಾದ – ಇಂದು ಮುಸ್ಲಿಂ ಮಂಡಳಿ ಅರ್ಜಿ ವಿಚಾರಣೆ