ರಾಜ್ಯದ ವಿವಿಧೆಡೆ ಇಂದು ಬೆಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ 80 ಸ್ಥಳಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ಮೇಲೆ ದಾಳಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇರೆಗೆ 300ಕ್ಕೂ ಹೆಚ್ಚು ತಂಡದಿಂದ ಏಕಕಾಲದಲ್ಲಿ ವಿವಿಧೆಡೆ ದಾಳಿ ನಡೆಸಲಾಗಿದ್ದು ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ.
ಕೊಪ್ಪಳ – ಬೆಳ್ಳಂ ಬೆಳಗ್ಗೆ ACB ದಾಳಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆಯ CPI ಆಗಿದ್ದ ಉದಯರವಿ ಮನೆ ಮೇಲೆ ದಾಳಿಯಾಗಿದೆ. ಉದಯರವಿ ಕಳೆದ ಒಂದು ತಿಂಗಳ ಹಿಂದೆ ವರ್ಗಾವಣೆಯಾಗಿದ್ದರು. ಗಂಗಾವತಿ ಗ್ರಾಮೀಣ ಠಾಣೆಯಿಂದ ವರ್ಗಾವಣೆ ಯಾಗಿದ್ದ ಉದಯರವಿ ಅವರು ರಾಜ್ಯ ಗುಪ್ತದಳ ಇಲಾಖೆಗೆ ವರ್ಗಾವಣೆಯಾಗಿದ್ದರು. ಇನ್ನೂ ವರ್ಗಾವಣೆಯಾಗಿದ್ದರೂ ಗುಪ್ತದಳ ಇಲಾಖೆಗೆ ಇನ್ನು ಉದಯರವಿ ಜಾಯಿನ್ ಆಗಿರಲಿಲ್ಲ.. ಇದರ ನಡುವೆ ಉದಯರವಿ ಸೇರಿದಂತೆ ಅವರ ಆಪ್ತರುಗೆ ಸೇರಿದ ನಾಲ್ಕು ಕಡೆ ದಾಳಿ ಆಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ವಡ್ಡಹರಟ್ಟಿ ಯಲ್ಲಿರೋ ಮನೆ, ಉದಯರವಿ ಸ್ನೇಹಿತ ನ ಮನೇ ಹಾಗೂ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ಎರಡು ಕಡೆ ದಾಳಿಯಾಗಿದೆ. ಉದಯರವಿ ಅಕ್ರಮ ಆಸ್ತಿ ಗಳಿಕೆ ಆರೋಪದ ಜೊತೆಗೆ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು.
ಕಲಬುರಗಿ – ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಮನೆ ಮೇಲೆ ದಾಳಿ ನಡೆದಿದೆ.ಬೀದರ್ ನಲ್ಲಿ ಕೆಲಸ ಮಾಡುತ್ತಿರುವ ತಿಪ್ಪಣ್ಣ ಕೆಲಸ ಕೊಡಿಸುವುದಾಗಿ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪವಿದೆ. ಇದನ್ನೂ ಓದಿ : – ದೆಹಲಿ ಪೊಲೀಸರು ಕೆಲ ಕಾಂಗ್ರೆಸ್ ಮುಖಂಡರ ಪಕ್ಕೆಲುಬು ಮುರಿದಿದ್ದಾರೆ – ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ಗದಗ – ಪಂಚಾಯತ್ ಗ್ರೇಟ್-2 ಸೆಕ್ರೆಟರಿ ಪ್ರದೀಪ್ ಆಲೂರು ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಗದಗ ತಾಲೂಕಿನ ಅಸುಂಡಿ ಪಂಚಾಯತ್ ನಲ್ಲಿ ಕಾರ್ಯದರ್ಶಿ ಆಗಿದ್ದ ಪ್ರದೀಪ್ ಆಲೂರು. ಗದಗ ತಾಲೂಕಿನ ಹುಲಕೋಟಿ, ಬೆಂತೂರು ಮನೆ ಸೇರಿದಂತೆ ಅಸುಂಡಿ ಕಚೇರಿ ಮೇಲೆ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದಾಳಿ ನಡೆಸಲಾಗಿದೆ.
ಬಾಗಲಕೋಟೆ – ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಶಂಕರ ಗೋಗಿ ನಿವಾಸದಲ್ಲಿ ದಾಖಲೆ ಜಾಲಾಡುತ್ತಿರುವ ಅಧಿಕಾರಿಗಳು. ಸದ್ಯ ಮನೆಯಲ್ಲಿ 1 ಲಕ್ಷ 15 ಸಾವಿರ ರೂ. ನಗದು ಹಣ ಪತ್ತೆಯಾಗಿದ್ದು, ಮಗನ ಹೆಸರಿನಲ್ಲಿ 8 ಲಕ್ಷ 90 ಸಾವಿರ ರೂ. ಇಟ್ಟಿದ್ದಾರೆ. ಆದಾಯಕ್ಕಿಂತ ಶೇಕಡಾ 200%ರಷ್ಟು ದುಪ್ಪಟ್ಟು ಆಸ್ತಪಾಸ್ತಿ ಪತ್ತೆಯಾಗಿರೋ ಮಾಹಿತಿ ಕೇಳಿಬಂದಿದೆ.
ಚಿಕ್ಕಮಗಳೂರು – ಜಿಲ್ಲೆಯಲ್ಲೂ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು, SDA ತಿಮ್ಮಯ್ಯ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳು. ಡಿವೈಎಸ್ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿಲಾಗಿದೆ. ಏಕಕಾಲದಲ್ಲಿ 3 ಕಡೆ ದಾಳಿ ನಡೆಸಿದ ಅಧಿಕಾರಿಗಳು ಕಡೂರು ಪಟ್ಟಣದ ತಿಮ್ಮಯ್ಯ ನಿವಾಸ, ತಿಮ್ಮಯ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಅಜ್ಜಂಪುರ ಪುರಸಭೆ ಕಚೇರಿ, ತಿಮ್ಮಯ್ಯ ತಂದೆಯ ಬಸೂರು ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ 80 ಲಕ್ಷಕ್ಕೂ ಅಧಿಕ ಹಣ ಗಳಿಸಿರುವ ಆರೋಪ. 3 ಕಡೆಗಳಲ್ಲೂ ಪರಿಶೀಲನೆ ಮುಂದುವರಿಸಿರುವ ಎಸಿಬಿ ಅಧಿಕಾರಿಗಳು.
ಬೀದರ್ – ಜಿಲ್ಲೆಯ ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ಬೀದರ್ ಸಿಡಿಪಿಒ ತಿಪ್ಪಣ್ಣ ಸಿರ್ಸಂಗಿ, ಪಶು ವಿವಿ ಪ್ರೊಗ್ರಾಮ್ ಮ್ಯಾನೆಜರ್ ಮೃತ್ಯುಂಜಯ ಮನೆ ಮೇಲೆ ದಾಳಿ ನಡೆಸಲಾಗಿದೆ. ನಗರದ ಬಿಗ್ ಬಜಾರ ಬಳಿ ಇರುವ ಮೃತ್ಯುಂಜಯ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ್ದು. ದಾಳಿಯಲ್ಲಿ ಚಿನ್ನಾಭರಣ, ಅಕ್ರಮ ಆಸ್ತಿಗಳಿಕೆ ದಾಖಲೆ ಪತ್ರಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡ – ಬಾಗಲಕೋಟ ಆರ್ ಟಿ ಒ ಎಲ್ಲಪ್ಪ ಪಡಸಾಲಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಳಿ ವೇಳೆ ಆರ್ ಟಿ ಒ ಮನೆಯಲ್ಲಿ 3 ಚಿನ್ನದ ಕ್ವಾಯಿನ್, 2 ಬೆಳ್ಳಿ ಕ್ವಾಯಿನ್ ಹಾಗೂ ಸುಮಾರು 20 ಲಕ್ಷ ನಗದು ಪತ್ತೆಯಾಗಿದೆ.
ಬೆಳಗಾವಿ – ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ. ವೈ. ಪವಾರ್ ಅವರ ನಿವಾಸದ ಮೇಲೆ ದಾಳಿ ನಡೆದಿದೆ. ಹಾವೇರಿ – ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಯೋಜನಾಧಿಕಾರಿ ಎಇ ಚಂದ್ರಪ್ಪ ಓಲೇಕಾರ್ ನಿವಾಸದ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ : – ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದು ಕಾನೂನು ಬಾಹಿರ –ಸಿಎಂ ಬೊಮ್ಮಾಯಿ