ಅಂತರ ರಾಜ್ಯ ನಕಲಿ ರಸ ಗೊಬ್ಬರ (Fake fertilizer) ದಂಧೆಗೆ ಬ್ರೇಕ್ ಹಾಕಿರೋ ಕೋಲಾರ ಪೊಲೀಸರು (Police) ಆರೋಪಿಯನ್ನ ಬಂಧಿಸಿದ್ದಾರೆ. ಮುಳಬಾಗಿಲಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡಿದ ಇಬ್ಬರು ವರ್ತಕರನ್ನ ಬಂಧಿಸಲಾಗಿದೆ.
ಮೂರ್ತಿ ಟ್ರೇಡರ್ಸ್ ಮಾಲೀಕ ಕೃಷ್ಣಮೂರ್ತಿ(Krishnamurthy) ಹಾಗೂ ಕಮಲ್ ಟ್ರೇಡರ್ಸ್ ಮಾಲೀಕ ಅರವಿಂದ್ (Aravind) ಬಂಧಿತ ಆರೋಪಿಗಳು. ತಮಿಳುನಾಡಿನ ಧರ್ಮಪುರಿ (Tamilnadu dharmapuri) ಜಿಲ್ಲೆಯ ಕಾಮರಾಜ್ (kamraj) ನಕಲಿ ರಸ ಗೊಬ್ಬರ ಸರಬರಾಜು ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ಮತ್ತೊಬ್ಬ ಪ್ರಮುಖ ಅರೋಪಿ ಶರವಣಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ತಮಿಳುನಾಡಿನಿಂದ ಸರಬರಾಜಾಗುತ್ತಿದ್ದ ನಕಲಿ ರಸಗೊಬ್ಬರವನ್ನ ಕೆಂಪು ಹಾಗೂ ಜೇಡಿ ಮಣ್ಣು ಮಿಶ್ರಿಣ ಮಾಡಿ ಅರೋಪಿಗಳು ಮಾರಾಟ ಮಾಡುತ್ತಿದ್ದರು.
ತಮಿಳುನಾಡಿನ ನಾಮಕಲ್ ಜಿಲ್ಲೆಯ ತಿರಚಂಗುರು ಬಳಿ ಇರುವ ನಕಲಿ ರಸಗೊಬ್ಬರ ತಯಾರಿ ಮಾಡುವ ಕಂಪನಿಗೆ ಬೀಗ ಹಾಕಲಾಗಿದೆ. ನಕಲಿ ಮಾಫಿಯಾದಲ್ಲಿ ಕೆಲ ಅಧಿಕಾರಿಗಳು ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ರೈತ ರಾಜೇಶ್ ಎಂಬುವರು ದೂರು ನೀಡಿದ್ದ ಹಿನ್ನಲೆ ತನಿಖೆ ನಡೆಸಿದ ಪೋಲೀಸರು ಮುಳಬಾಗಿಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ : – ಅಮ್ಮನಿಗೆ ಹುಷಾರಿಲ್ಲ..ಆಸ್ಪತ್ರೆಯಲ್ಲಿದ್ದಾರೆ…ದಯವಿಟ್ಟು ವಿಚಾರಣೆ ಮುಂದೂಡಿ ಎಂದ ರಾಗಾ