ದೇಶದಲ್ಲಿ ಸಾಮಾಜಿಕ ಸೌಹಾರ್ದತೆ ಹಾಳು ಮಾಡುತ್ತಿರು ಬಿಜೆಪಿ ಏನಾದ್ರೂ ಅನಾಹುತ ಸಂಭವಿಸಿದಲ್ಲಿ ಹೊಣೆ ಹೊರಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ (Sanjay ravath) ಹೇಳಿದ್ದಾರೆ.
ಅಲ್ ಖೈದಾ (Al queda) ಉಗ್ರ ಸಂಘಟನೆಯಿಂದ ಆತ್ಮಾಹುತಿ ಬೆದರಿಕೆ ಪತ್ರ ಕುರಿತ ವರದಿ ಉಲ್ಲೇಖಿಸಿದ ಸಂಜಯ್ ರಾವತ್, ಒಂದು ವೇಳೆ ಏನಾದರು ಸಂಭವಿಸಿದಲ್ಲಿ ಬಿಜೆಪಿಯೇ ಹೊಣೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ದೇಶದಲ್ಲಿ ಎಲ್ಲವೂ ಚೆನ್ನಾಗಿತ್ತು. ಬಿಜೆಪಿ ವಕ್ತಾರರು ಎರಡು ಧರ್ಮಗಳ ನಡುವೆ ಘರ್ಷಣೆ ಬಯಸಿದ್ದಾರೆ. ಒಂದು ವೇಳೆ ದೇಶದಲ್ಲಿ ಏನಾದರು ನಡೆದಲ್ಲಿ ಬಿಜೆಪಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಪ್ರವಾದಿ ಮೊಹಮ್ಮದ್ (Pravadi mohammed) ಕುರಿತು ಬಿಜೆಪಿ ಮುಖಂಡರಿಂದ ವಿವಾದಾತ್ಮಕ ಹೇಳಿಕೆ ನಡುವೆ ದೆಹಲಿ (Delhi) , ಮುಂಬೈ (Mumbai) , ಉತ್ತರ ಪ್ರದೇಶ (Uttar pradesh) ಮತ್ತು ಗುಜರಾತ್ ನಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಆಲ್ ಖೈದ್ ಬೆದರಿಕೆ ನಂತರ ರಾವತ್ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ : – ಉತ್ತರ ಪ್ರದೇಶದಲ್ಲಿ ಆಲ್ ಖೈದಾ ಆತ್ಮಾಹುತಿ ದಾಳಿಗೆ ಸಂಚು