ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಅಸಾನಿ ಚಂಡಮಾರುತದಿಂದಾಗಿ ಇನ್ನೂ 2 ದಿನ ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್ ಆಗಿರಲಿದೆ. ತುಂತುರು ಮಳೆ ಜೊತೆಗೆ ಮೋಡ ಕವಿದ ವಾತಾವರಣವಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹವಮಾನ ಹೀಗೆ ಇರಲಿದೆ.
ದಕ್ಷಿಣಕನ್ನಡ , ಉಡುಪಿ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗದಲ್ಲಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ರಾಮನಗರ ಜಿಲ್ಲೆಗಳಲ್ಲಿ ದಿನ ವಿಡೀ ಮೋಡ ಮುಸುಕಿದ ವಾತಾವರಣ ಇರಲಿದೆ. ಗಾಳಿ ಜೊತೆಗೆ ಬಿಟ್ಟು ಬಿಟ್ಟು ಜಿಟಿಜಿಟಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ : – ಹೆಂಡತಿಗೆ ಹಿಂಸೆ ಕೊಡುವುದರ ಪೈಕಿ ಕರ್ನಾಟಕಕ್ಕೆ ಅಗ್ರಸ್ಥಾನ
ಅಸಾನಿ ಚಂಡಮಾರುತ ಬೆಂಗಳೂರಿನಲ್ಲಿ 54 ವರ್ಷದ ಹಿಂದಿನ ದಾಖಲೆ ರಿಪೀಟ್ ಮಾಡಿದೆ. 54 ವರ್ಷದ ಬಳಿಕ ಬೆಂಗಳೂರಿನ ವೆದರ್ ಸೆಕೆಂಡ್ ಕೂಲೆಸ್ಟ್ ಡೇ ದಾಖಲೆ ಸೃಷ್ಟಿಯಾಗಿದೆ. 1972ರಲ್ಲಿ ಮೇ 14 ರಂದು 22.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಆದರೆ ಬೆಂಗಳೂರಿನಲ್ಲಿ 23.00 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಲ್ಲದೇ ಇದು ಎರಡನೇ ಅತ್ಯಂತ ಕೂಲೆಸ್ಟ್ ಡೇ ಅಂತ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : – ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗಿಲ್ಲ – ಗೃಹ ಸಚಿವ ಆರಗ ಸ್ಪಷ್ಟನೆ