ಬೆಂಗಳೂರಿನ ವಿಶ್ವವಿದ್ಯಾಲಯ (Banglore university ) ವಿದ್ಯಾರ್ಥಿಗಳ ಒಕ್ಕೂಟ ( students union ) ಬಂದ್ ಗೆ ಕರೆ ಕೊಟ್ಟಿದ್ದಾರೆ. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ( Research and postgraduate students ) ಒಕ್ಕೂಟದಿಂದ ಧರಣಿ ಮಾಡಲಿದ್ದಾರೆ .
ತರಗತಿ ಬಹಿಷ್ಕರಿಸಿ ಅಹೋರಾತ್ರಿ ಹೋರಾಟಕ್ಕೆ ನಿರ್ಧರಿಸಿದ್ದಾರೆ . ನಾಳೆ ಬೆಳಗ್ಗೆ 10 ಗಂಟೆಯಿಂದ ಧರಣಿ ಆರಂಭವಾಗಲಿದೆ . ಬೆಂಗಳೂರು ವಿವಿ ಆಡಳಿತ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಯಲಿದೆ. ವಿದ್ಯಾರ್ಥಿಗಳ ವಿರುದ್ಧ ನೀಡಿರುವ ದೂರನ್ನು ವಾಪಾಸ್ ಗೆ ಪಡೆಯಲು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ವಿವಿ ಪ್ರಭಾರ ವಿತ್ತಾಧಿಕಾರಿ ಆರ್.ಜಯಲಕ್ಷ್ಮಿ (R. jayalakshmi ) ದೂರು ನೀಡಿದ್ದಾರೆ . ದೂರು ಹಿಂಪಡೆಯುವವರೆಗೂ ಧರಣಿ ನಿಲ್ಲಿಸದಿರಲು ವಿದ್ಯಾರ್ಥಿಗಳು ಪ್ಲ್ಯಾನ್ ಮಾಡಿದ್ದಾರೆ .ಮೊನ್ನೆ ವಿವಿ ಕುಲಪತಿ ಮುಖಾಂತರ ಪ್ರಭಾರ ವಿತ್ತಾಧಿಕಾರಿ ದೂರು ನೀಡಿದ್ದರು .ಇದನ್ನೂ ಓದಿ : – ನಾನೊಬ್ಬ ಹಿರಿಯನಾಗಿದ್ದು, ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಂತಕ್ಕೆ ಬೆಳೆದಿದ್ದೇನೆ – ಜಿ.ಟಿ ದೇವೇಗೌಡ
ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದಾರೆ .ಇದೇ ಬೆನ್ನಲ್ಲೇ ವಿತ್ತಾಧಿಕಾರಿ ಮತ್ತು ಕುಲಪತಿ ಪ್ರೊ. ವೇಣುಗೋಪಾಲ್ ವಿರುದ್ಧ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ . ನಿನ್ನೆ ಇವರಿಬ್ಬರ ವಿರುದ್ಧ ವಿವಿ ವಿದ್ಯಾರ್ಥಿ ಒಕ್ಕೂಟ ದೂರು ನೀಡಿದೆ .ಬೆಂಗಳೂರು ವಿವಿಯ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ .ಸುಮಾರು 52 ವಿಭಾಗಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿದ್ದಾರೆ . ಇದನ್ನೂ ಓದಿ : – ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ- ಪ್ರವಾಸಕ್ಕೆ ಹೋಗಿದ್ದ ರಾಜ್ಯದ 7 ದುರ್ಮರಣ