ಯುನಿಕಾರ್ನ್ ಮೂಲಕ 25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹ – ಮೋದಿ

ಇದೇ ತಿಂಗಳ ಮೇ 5ರಂದು ದೇಶದಲ್ಲಿ ಯುನಿಕಾರ್ನ್ ಕಂಪನಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಅದರ ಒಟ್ಟು ಮೌಲ್ಯವೂ 25 ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ 89ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆಯಷ್ಟೇ ದೇಶ ನಮಗೆಲ್ಲರಿಗೂ ಸ್ಫೂರ್ತಿ ನೀಡುವಂತಹ ಸಾಧನೆ ಮಾಡಿದೆ. ಕ್ರಿಕೆಟ್ ಮೈದಾನದಲ್ಲಿ ಶತಕದ ಬಗ್ಗೆ ಕೇಳುತ್ತಲೇ ಇರುತ್ತೀರಿ. ಇನ್ನೊಂದು ಮೈದಾನದಲ್ಲಿ ಭಾರತ ಶತಕ ಬಾರಿಸಿದೆ. ಇದು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ. ನಮ್ಮ ಒಟ್ಟು ಯುನಿಕಾರ್ನ್ಗಳಲ್ಲಿ 44 ಕಳೆದ ವರ್ಷ ಮಾಡಲಾಗಿತ್ತು.

ಈ ವರ್ಷ 3-4 ತಿಂಗಳಲ್ಲಿ ಇನ್ನೂ 14 ಯುನಿಕಾರ್ನ್ಗಳನ್ನು ತಯಾರಿಸಲಾಗಿದೆ. ನಮ್ಮ ಸ್ಟಾರ್ಟ್ ಅಪ್ಗಳು ಕೊರೊನಾ ಅವಧಿಯಲ್ಲಿಯೂ ಸಂಪತ್ತು ಮತ್ತು ಮೌಲ್ಯಗಳಿರುವುದನ್ನು ಮುಂದುವರಿಸಿದವು. ದೇಶದಲ್ಲಿ ಸ್ಟಾರ್ಟ್ ಅಪ್ಗಳಿಗೆ ಅನುಕೂಲಕರ ವಾತಾವರಣವಿದೆ. ದೊಡ್ಡ ಮಹಾನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳಲ್ಲೂ ಸ್ಟಾರ್ಟಪ್ಗಳು ರೂಪುಗೊಳ್ಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

 ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!