ಸರ್ಕಾರದ ಕೆಲಸಕ್ಕೆ ಅಮೀತ್ ಶಾ ಬಂದಿದ್ದಾರೆ. ಅದರಲ್ಲಿ ಇಂಟರ್ಫೇರ್ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬಸವ ಜಯಂತಿ ಆಚರಣೆ ಹಿನ್ನೆಲೆ ಚಾಲುಕ್ಯ ಸರ್ಕಲ್ ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿಸ ಅವರು ನನಗೆ ಬಂದಿರುವ ಮಾಹಿತಿ ಪ್ರಕಾರ ಯುವಕರ ಭವಿಷ್ಯ ಮಲ್ಲೇಶ್ವರಂಗೆ, ಮಾಗಡಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಯುವಕರಿಗೆ ಶಾಕ್ ಆಗಿದೆ.
PWD ಯಲ್ಲೂ ಸ್ಕ್ಯಾಮ್, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯಲ್ಲೂ ಸ್ಕ್ಯಾಮ್. ಯುವಕರಿಗೆ ಎಲ್ಲಿ ನ್ಯಾಯವಿದೆ ಎಂದು ಪ್ರಶ್ನಿಸಿದ್ದಾರೆ. 3 ಜನ ಫಸ್ಟ್ ರ್ಯಾಂಕ್. 10 ಜನರಲ್ಲಿ 3 ಜನ ಮಾಗಡಿ ಯವರು. ಅಂಗಡಿ ಓಪನ್ ಮಾಡಿದ್ದಕ್ಕೆ ಖರೀದಿಗೆ ಹೋಗ್ತಾರೆ. ಹಾಗಾಗಿ ಅಂಗಡಿ ಓಪನ್ ಮಾಡಿದವರು ಯಾರು. ಸಂಪರ್ಕ ಕೊಟ್ಟವರು ತೆಗೆದುಕೊಂಡವರು ಯಾರು. ಯಾರು ಪೇಪರ್ ಕಲೆಕ್ಟ್ ಮಾಡಿದ್ರು. ಯಾರು ಇದರಲ್ಲಿ ಭಾಗಿಯಾಗಿದ್ದಾರೆ. ಯಾವ ರಾಜಕಾರಣಿ ಹಣ ಪಡೆದಿದ್ದಾರೆ. ನಮಗೆ ಎಕ್ಸಾಂ ರದ್ದು ಮುಖ್ಯವಲ್ಲ. ಇದನ್ನು ಓದಿ:-ನಾಯಕತ್ವ ಬದಲಾವಣೆ ಬರೀ ಕಪೋಲ ಕಲ್ಪಿತ – ಅರುಣ್ ಸಿಂಗ್
ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಯಾವ ಮಂತ್ರಿ ಯಾರ ಬಳಿ ಹಣ ವಸೂಲಿ ಮಾಡಿಸಿದ್ದಾರೆ. 80 ಲಕ್ಷ ಮಾತ್ರವಲ್ಲ ಮಾಗಡಿ ಒಂದರಲ್ಲಿ ಎರಡು ಕೋಟಿ ಕಲೆಕ್ಷನ್ ಆಗಿದೆ. 10 ಲಕ್ಷ, 2 ಲಕ್ಷ ಕೊಟ್ಟಿದ್ದಾರೆ. ಕೆಲವರು ಆಸ್ತಿ ಮಾರಾಟ ಮಾಡಿದ್ದಾರೆ. ಹಾಗಾಗಿ ಇದರಲ್ಲಿ ಭಾಗಿಯಾಗಿರುವ ಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ರಾಮನಗರ ಕ್ಲೀನ್ ಮಾಡ್ತೇನೆ ಬಂದ್ರು. ಇದೇನಾ ಕ್ಲೀನ್ ಎಂದು ಅಶ್ವಥ್ ನಾರಾಯಣ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ರು.
ಸಿಎಂ ಬದಲಾವಣೆ ವಿಚಾರ
ಯತ್ನಾಳಾದರೂ ಮಾತಾಡಲಿ ಯಾರಾದರೂ ಮಾತಾಡಲಿ ನಮಗೆ ಅದು ಪ್ರಶ್ನೆಯಲ್ಲ. ಸಮರ್ಥರೂ ಅಸಮರ್ಥರೋ ಯಾವ ಫಾರ್ಮಲ್ ಬರುತ್ತೋ. ಯುಪಿ, ಗುಜರಾತ್,ದೆಹಲಿ ಫಾರ್ಮಲ್ ಆದರೂ ಬರಲಿ. ಕರ್ನಾಟಕದಲ್ಲಿ ಹೊಸ ಫಾರ್ಮಲ್ ಆದ್ರೂ ಮಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಆಡಳಿತ ಕೊಡಬೇಕು. ಭ್ರಷ್ಟಾಚಾರ ನಿಲ್ಲಬೇಕು ಎಂದು ತಿಳಿಸಿದ್ರು.
ಇದನ್ನು ಓದಿ :- ರಾಜ್ಯಕ್ಕೆ ಅಮಿತ್ ಶಾ ಭೇಟಿ – ನಾಯಕತ್ವ ಬದಲಾವಣೆ ಕುರಿತು ಹೆಚ್ಚಿದ ಕುತೂಹಲ