ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ( Belur Raghavendra Shetty ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ( D. ROOPA ) ನಡುವೆ ಪತ್ರ ಸಮರ ಆರಂಭವಾಗಿದೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯ ಪರಸ್ಪರ ಆರೋಪದಡಿ ಇಬ್ಬರೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿ ಬಿಜೆಪಿ (BJP ) ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಬಿಜೆಪಿ ಸರ್ಕಾರದಿಂದ ನೇಮಕಗೊಂಡಿದ್ದಾರೆ, ಎಂಡಿ ಡಿ ರೂಪ ಮೌದ್ಗಿಲ್ ಐಜಿಪಿ ಶ್ರೇಣಿಯ ಹಿರಿಯ ಐಪಿಎಸ್ (IPS) ಅಧಿಕಾರಿಯಾಗಿದ್ದಾರೆ.
ರಾಘವೇಂದ್ರ ಶೆಟ್ಟಿ ವಿರುದ್ಧ ಬುಧವಾರ ಪ್ರತಿ ದೂರು ಸಲ್ಲಿಸಿರುವ ರೂಪಾ, ‘ನಿಗಮದ ಅಧ್ಯಕ್ಷರು ಅಧಿಕಾರ ಇಲ್ಲದಿದ್ದರೂ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. 25 ಕೋಟಿ ಅಕ್ರಮ ನಡೆಸಿ ಪ್ರಧಾನ ವ್ಯವಸ್ಥಾಪಕ ಸ್ಥಾನದಿಂದ ವಜಾಗೊಂಡಿರುವ ಕಿಶೋರ್ ಕುಮಾರ್ (KISHOR KUMAR ) ಎಂಬುವವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ 5 ಕೋಟಿ ಹಣದ ವ್ಯವಹಾರದ ಮಾತುಕತೆ ನಡೆದಿರುವ ಮಾಹಿತಿ ಇದೆ’ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ : – ಬಿಜೆಪಿಯವರ ಬಗ್ಗೆ ಮಾತನಾಡಿ ಕಾಲಹರಣ ಮಾಡೋದು ಬೇಡ – ಡಿಕೆ ಶಿವಕುಮಾರ್
‘ನಿಗಮದ ಅಧ್ಯಕ್ಷರಿಗೆ ನೀಡಿದ್ದ ಕಾರನ್ನು ಅವರೇ ಅಪಘಾತ ಮಾಡಿ, ಚಾಲಕನ ಮೇಲೆ ಹೊರಿಸಿದ್ದರು. ಕಾರಿನ ದುರಸ್ತಿಗೆ 10.84 ಲಕ್ಷ ವೆಚ್ಚವಾಗಿದೆ. ಅಧ್ಯಕ್ಷರ ಕಚೇರಿ ಸಿಬ್ಬಂದಿಯ ಹಾಜರಾತಿ ವಿವರ ಒದಗಿಸದೇ ಮಾಸಿಕ 5 ಲಕ್ಷದಷ್ಟು ವೇತನ ಮತ್ತು ಇತರ ವೆಚ್ಚ ಪಡೆಯಲಾಗುತ್ತಿದೆ. ನಿಗಮದ ಅಧಿಕಾರಿಗಳಿಂದ ಬಲವಂತವಾಗಿ ಊಟ ತರಿಸಿಕೊಂಡು ಬಳಸಿದ್ದಾರೆ. ಮಹಿಳಾ ಆಪ್ತ ಸಹಾಯಕಿಯೇ ಬೇಕು ಎಂಬ ಬೇಡಿಕೆಯನ್ನು ಅಧ್ಯಕ್ಷರು ಇರಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಣ ನೀಡದೆ ಶೋ ರೂಂ ಗಳಿಂದ ಶ್ರೀಗಂಧ ಹಾಗೂ ಇತರೆ ಉತ್ಪನ್ನಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ರೂಪಾ ದೂರಿದ್ದಾರೆ.
ಇದನ್ನೂ ಓದಿ : – ದೇವನಹಳ್ಳಿ ರೆಸಾರ್ಟ್ ನಲ್ಲಿ ಇಂದು ಮತ್ತು ನಾಳೆ ಕಾಂಗ್ರೆಸ್ ‘ನವ ಸಂಕಲ್ಪ ಶಿಬಿರ’