ಮಧ್ಯಪ್ರದೇಶ (Madhya pradesh) ದ ಮೊರೆನಾದಲ್ಲಿ ಭಾರತೀಯ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ವಿಂಗ್ ಕಮಾಂಡರ್ ಹುತಾತ್ಮ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಹನುಮಂತರಾವ್ (Hanumanth rao) ಸಾರಥಿ ಮನೆಯಲ್ಲಿ ನೀರವ ಮೌನವಿದೆ. ಇಂದು ಬೆಳಗಾವಿಗೆ ಪಾರ್ಥಿವ ಶರೀರ ಆಗಮನವಾಗಿದೆ. ದೆಹಲಿಯಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮನವಾಗಿದೆ.
ಪಾರ್ಥಿವ ಶರೀರಕ್ಕೆ ಗಾಡ್ ಆಫ್ ಆನ್ ಏರ್ ಫೋರ್ಸ್ (Air force) ಸಿಬ್ಬಂದಿ ಸಲ್ಲಿಸಿದ್ದಾರೆ. ಮನೆಯಲ್ಲಿ ಕುಟುಂಬಸ್ಥರಿಂದ ಧಾರ್ಮಿಕ ವಿಧಿ ವಿಧಾನ ಸಲ್ಲಿಸಲಿದ್ದಾರೆ. ಆನಂತರ ಹುತಾತ್ಮ ವೀರ ಯೋಧನ ಅಂತಿಮಯಾತ್ರೆ ನಡೆಯಲಿದೆ. ಗಣೇಶಪುರ ನಿವಾಸದಿಂದ ಬೆನಕನಹಳ್ಳಿ ಗ್ರಾಮದವರೆಗೂ ಅಂತಿಮಯಾತ್ರೆ ನಡೆಯಲಿದೆ. ಬೆನಕನಹಳ್ಳಿ (Benakana halli) ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಹುತಾತ್ಮ ವೀರ ಯೋಧ ಹನುಮಂತರಾವ್ ಇಡೀ ಕುಟುಂಬವೇ ದೇಶ ಸೇವೆಗೆ ಸಮರ್ಪಣೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ವೇಳೆ ಹನುಮಂತರಾವ್ ರಿಸರ್ವ್ ಟೀಮ್ ನಲ್ಲಿದ್ದರು. ಹನುಮಂತರಾವ್ ಪಠಾಣಕೋಟ್ ಏರ್ ಬೇಸ್ ನಲ್ಲಿದ್ದರು. ಹುತಾತ್ಮ ಯೋಧನ ತಂದೆ ರೇವಣಸಿದ್ಧಪ್ಪ 32 ವರ್ಷ ಕಾಲ ಇಂಡಿಯಾ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು. ಇದನ್ನು ಓದಿ :- ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ – ಸಿಎಂ ಬೊಮ್ಮಾಯಿ
ಹಿರಿಯ ಪುತ್ರ ಪ್ರವೀಣ (Praveen) ಗ್ರುಪ್ ಕ್ಯಾಪ್ಟನ್ ಇಂಡಿಯನ್ ಏರ್ ಫೋರ್ಸ್ ನಲ್ಲಿದ್ದರು. ಕಿರಿಯ ಪುತ್ರ ಹನುಮಂತ ರಾವ್ ವಿಂಗ್ ಕಮಾಂಡರ್ ಇಂಡಿಯನ್ ಏರ್ ಫೋರ್ಸ್ ನಲ್ಲಿದ್ದರು ಪ್ರವೀಣ ಅವರ ಪತ್ನಿ ಏರ್ ಫೋರ್ಸ್ ನಲ್ಲಿ ಪೈಲೆಟ್ ಆಫೀಸರ್ ಆಗಿದ್ದರು. ಅದೇ ಹುತಾತ್ಮ ಹನುಮಂತರಾವ್ ಪತ್ನಿ ಏರ್ ಪೋರ್ಸ್ ನಲ್ಲಿ ಅಕೌಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು.
ಇದನ್ನು ಓದಿ :- ಸಂಕಷ್ಟ ನಿವಾರಣೆಗೆ ಮಂತ್ರಾಲಯದಲ್ಲಿ ರಾಯರ ಮೊರೆ ಹೋದ ಹೆಚ್ಡಿಕೆ ದಂಪತಿ