ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಗೆದ್ದ ಭಾರತದ ನಿಖತ್ ಜರೀನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇಸ್ತಾಂಬುಲ್ ನಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್ ಷಿಪ್ ನ ಫ್ಲೈವೇಯ್ಟ್ (52 ಕೆಜಿ) ಫೈನಲ್ ನಲ್ಲಿ ಭಾರತದ ಬಾಕ್ಸರ್ ನಿಖತ್ ಜರೀನ್ ಥಾಯ್ಲೆಂಡ್ ನ ಜಿಟ್ಪಾಂಗ್ ಜುಟಮಾಸ್ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ತೆಲಂಗಾಣದ ಬಾಕ್ಸರ್ ತನ್ನ ಥಾಯ್ಲೆಂಡ್ ಪ್ರತಿಸ್ಪರ್ಧಿಯನ್ನು ಸೋಲಿಸಿ 5-0 ಅಂತರದ ಸರ್ವಾನುಮತದ ತೀರ್ಪಿನ ಮೂಲಕ ಗೆದ್ದರು. ಈ ಗೆಲುವಿನೊಂದಿಗೆ ಜರೀನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಐದನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018) ಸರಿತಾ ದೇವಿ (2006), ಜೆನ್ನಿ ಆರ್ ಎಲ್ (2006) ಮತ್ತು ಲೇಖಾ ಕೆಸಿ (2006) ವಿಶ್ವ ಪ್ರಶಸ್ತಿ ಗೆದ್ದ ಇತರ ಆಟಗಾರ್ತಿಯರಾಗಿದ್ದಾರೆ. ಇದನ್ನೂ ಓದಿ :- ಥಾಮಸ್ ಕಪ್ 2022 – ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ
ನಾಲ್ಕು ವರ್ಷಗಳ ನಂತರ ಭಾರತೀಯರೊಬ್ಬರು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಮೇರಿ ಕೋಮ್ ಕೊನೆಯ ಬಾರಿಗೆ 2018ರ ಆವೃತ್ತಿಯಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
ತೆಲಂಗಾಣದ ನಿಜಮಾಬಾದ್ ಜಿಲ್ಲೆಯ ನಿಖತ್ ಜರೀನ್ ಸಾಧನೆಯನ್ನ ಇಡೀ ದೇಶವೇ ಕೊಂಡಾಡಿದೆ.
ಭಾರತದಲ್ಲಿ ಪಂಜಾಬ್, ಮತ್ತು ಈಶಾನ್ಯ ರಾಜ್ಯಗಳ ಕ್ರೀಡಾಪಟುಗಳು ಬಾಕ್ಸಿಂಗ್ ನಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಅಂತಹುದರಲ್ಲಿ ನಿಖತ್ ಜರೀನ್ ಈ ಸಾಧನೆ ಮಾಡೋ ಮೂಲಕ ದಕ್ಷಿಣ ಭಾರತ ಬಾಕ್ಸರ್ ಗಳಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ :- ಭೀಕರ ಕಾರು ಅಪಘಾತ – ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ನಿಧನ