ಉತ್ತರ ಪ್ರದೇಶದ (uttar pradesh ) ಲಖೀಂಪುರ ಖೇರಿ ಬಳಿ ಭೀಕರ ಅಪಘಾತ ಹಿನ್ನೆಲೆಯಲ್ಲಿ . ಪುಣ್ಯಭೂಮಿ ಅಯೋಧ್ಯೆಗೆ (ayodya) ತೆರಳುತ್ತಿದ್ದ ಬೀದರ್ ನ (bidar ) ಪ್ರವಾಸಿಗರ ತಂಡದ ಬಸ್ ಅಪಘಾತವಾಗಿದೆ .
ಒಂದೇ ಕುಟುಂಬದ 7 ಜನ ಅಸುನೀಗಿ ಹಾಗೂ 9 ಜನ ಗಾಯಗೊಂಡಿರುವ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ನಮ್ಮವರ ಪರ ಕಾಳಜಿವಹಿಸುವ ಕುರಿತು ನಾನು ಯುಪಿ ಯ ಸಿ ಎಂ ಯೋಗಿ ಆದಿತ್ಯನಾಥ್ ರವರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಅಲ್ಲಿನ ಸ್ಥಳೀಯ ಆಡಳಿತ ಭರದಿಂದ ಕಾರ್ಯಾಚರಣೆ ನಡೆಸುತ್ತಿದೆ.
ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ದೊರಕಿಸಿಕೊಡುವ ಸಲುವಾಗಿ ಸರ್ಕಾರವು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸ್ಥಳೀಯ ಆಡಳಿತ ಗಾಯಾಳುಗಳ ಆರೈಕೆಗೆ ಸಂಪೂರ್ಣ ಮುಂದಾಗಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲಾ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ . ಇದನ್ನೂ ಓದಿ : – ಸಿದ್ದರಾಮಯ್ಯ ನೀವೂ ಡೋಂಗಿ ರಾಜಕಾರಣಿ – ನಳಿನ್ ಕುಮಾರ್ ಕಟೀಲ್ ವಾಗ್ದಾಳಿ