ಸಿದ್ದರಾಮಯ್ಯ ಅವರೇ, ನಿಮ್ಮ ಕೈಗೆ ಹ್ಯೂಬ್ಲೊಟ್ ವಾಚ್ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯನವರೇ ನೀವು ಕುಡಿದ ಕುಡಿಸಿದ ಚಹಾದಲ್ಲಿ ಬಣ್ಣ, ರುಚಿ, ಶಕ್ತಿ ಇತ್ತೇ? ಸಿದ್ದರಾಮಯ್ಯ ಅವರು ವರಿಷ್ಠರಿಗೆ ಬಣ್ಣ, ರುಚಿ, ಶಕ್ತಿ ಈ ಮೂರು ಗುಣಗಳ ಹೊಸ ಬ್ರ್ಯಾಂಡ್ ಚಹಾ ಕುಡಿಸಿ ಖುರ್ಚಿ ಉಳಿಸಿಕೊಂಡಿದ್ದೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ನಗರ ಯೋಜನೆಯನ್ನು ಬದಲಿಸುವ ಬಹುದೊಡ್ಡ ಗೋಲ್ಮಾಲ್ ನಡೆಯಿತು. ಆಗ ನಡೆದ ಕೆಂಪು, ಹಳದಿ, ಹಸಿರು ಜೋನ್ ಬದಲಾವಣೆಯಿಂದ ಸಂಗ್ರಹವಾದ ಕಪ್ಪು ಹಣಕ್ಕೆ ಚಹಾದ ಬಣ್ಣವಿರಲಿಲ್ಲವೇ? ಈ ಗೋಲ್ ಹಣದಲ್ಲಿ ಚಹಾ ಆಸ್ವಾದಿಸಲಿಲ್ಲವೇ? ಇದನ್ನೂ ಓದಿ : – ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿನಾಡು ಎಂದು ಬೇರ್ಪಡಿಸ್ತಿದ್ದಾರೆ – ಅಣ್ಣಾಮಲೈ
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್ ಎರಡನೇ ಮದುವೆಯಾದರು. ಉಸ್ತುವಾರಿಗೆ ಬೆಂಗಳೂರಿನಲ್ಲಿ ಐಶಾರಾಮಿ ಪ್ಲಾಟ್ ಕೊಡಿಸಿರಲಿಲ್ಲವೇ? ಆಗ ದಿಗ್ವಿಜಯ್ ದಂಪತಿ ಜೊತೆಗೆ ಚಹಾ ಕುಡಿದಿರಲಿಲ್ಲವೇ? ಸಿದ್ದು ಭ್ರಷ್ಟ ಚಹಾಕೂಟ ಎಂದು ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸುವ ಯೋಜನೆ ಪ್ರಸ್ತಾಪಿಸಿದ್ದಿರಿ. ಖಾಸಗಿ ನಿರ್ಮಾಣ ಸಂಸ್ಥೆಯಿಂದ ಇದಕ್ಕಾಗಿ 15% ಲಂಚ ಸ್ವೀಕರಿಸಿದ ಎಂಬ ಆರೋಪವೂ ಕೇಳಿಬಂದಿತ್ತು. ಆಗ ನೀವು ಕುಡಿದ ಚಹಾದ ಬ್ರ್ಯಾಂಡ್ ಯಾವುದು?
ಸಿದ್ದರಾಮಯ್ಯನವರೇ,ನೀವು ಮುಖ್ಯಮಂತ್ರಿಯಾಗಿದ್ದಾಗ ನಡೆದ ಅರ್ಕಾವತಿ ರೀ ಡು ಪ್ರಕರಣ ನಡೆಯಿತು. ಈ ಹಗರಣದ ಮೂಲಕ ಸುಮಾರು 500 ಕೋಟಿ ಕಪ್ಪ ಕಾಂಗ್ರೆಸ್ ಹೈಕಮಾಂಡ್ಗೆ ಸಲ್ಲಿಕೆಯಾಗಿತ್ತು. ಆಗ ನೀವು ಚಹಾ ಕುಡಿದಿರಲಿಲ್ಲವೇ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ : – ಗೃಹ ಸಚಿವರ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿದ ಪ್ರಿಯಾಂಕ್ ಖರ್ಗೆ