ಬಳ್ಳಾರಿಯಲ್ಲಿ ಭಗೀರಥ ಜಯಂತಿ ಆಚರಣೆ ವೇಳೆ ಅಧಿಕಾರಿಗಳ ಎಡವಟ್ಟಿಗೆ ಕೆಂಡ ಮಂಡಲವಾದ ಸಾರಿಗೆ ಸಚಿವ ಶ್ರೀ ರಾಮುಲು (SRI RAMULU) ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ? ಎಂದು ಅಧಿಕಾರಿಗಳಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಗೀರಥ ರ ಪೋಟೋ ಹಾಗೂ ಬೇಕಾಬಿಟ್ಟಿ ಕಾರ್ಯಕ್ರಮ ಆಯೋಜನೆ ಮಾಡುದ್ದಕ್ಕೆ ರಾಮುಲು ಕೆಂಡಮಂಡಲರಾಗಿದ್ದಾರೆ. ಕಳೆಗುಂದಿದ ಪೋಟೋ ಹಾಗೂ ಜಯಂತಿಗೆ ಜನರನ್ನ ಸೇರಿಸಿಲ್ಲಎಂದು ಕೊರಳಿಗೆ ಹಾಕಿದ್ದ ಹೂವಿನ ಹಾರ ಎಸೆದು ಎಡಿಸಿ ಮಂಜುನಾಥ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗಪ್ಪ ರಂಗಣ್ಣನವರ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ : – ಕಾಂಗ್ರೆಸ್ ನವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ..ಇನ್ನು ನಾಡನ್ನು ಏನ್ ಕಟ್ತಾರೆ? – ನಳೀನ್ ಕುಮಾರ್ ಕಟೀಲ್
ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ, ಕಾಟ ಚಾರಕ್ಕೆ ಯಾಕೆ ಕೆಲಸ ಮಾಡ್ತೀರ. ಬೇಕಾಬಿಟ್ಟಿ ಮಾಡುವ ಕಾರ್ಯಕ್ರಮಗಳಿಗರ ನಾನು ಬರಲ್ಲ, ಇಂತ ವಿಚಾರದಲ್ಲಿ ರಾಜಿಯಾಗೋದೇ ಇಲ್ಲ ಎಂದು ಅವಾಸ್ ಹಾಕಿದ್ದಾರೆ. ಇದನ್ನೂ ಓದಿ : – ಗೃಹ ಸಚಿವರ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿದ ಪ್ರಿಯಾಂಕ್ ಖರ್ಗೆ