ಎರಡು ದಿನದಲ್ಲಿ ಕೇಂದ್ರ ನಾಯಕರನ್ನ ಸಂಪರ್ಕಿಸಿ ಸಂಪುಟ ವಿಸ್ತರಣೆ ಅಂತಿಮ ಗೊಳಿಸುವೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪರಿಷತ್ ಹಾಗೂ ರಾಜ್ಯ ಚುನಾವಣೆಯಲ್ಲಿ ಬ್ಯೂಸಿ ಇದ್ದೇವೆ. ನಿನ್ನೆಯಷ್ಟೇ ಕೊರ್ ಕಮಿಟಿ ಸಭೆ ಆಗಿದೆ. ಸಭೆಯ ನಿರ್ಧಾರದ ಬಗ್ಗೆ ಹೈ ಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಕಾಶ್ಮೀರಿ ಪಂಡಿತರ ಹತ್ಯೆಗಿಂತ ಸಿನಿಮಾ ಬಗ್ಗೆ ಮಾತಾಡೋದು ಪ್ರಧಾನಿಗೆ ಮುಖ್ಯವಾಗಿದೆ – ರಾಹುಲ್
ವಿಜಯೇಂದ್ರಗೆ ಪರಿಷತ್ ಸ್ಥಾನ ನೀಡಿ – ಮಂತ್ರಿ ಮಾಡುವ ವಿಚಾರ
ಅದು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ. ಹಿಜಾಬ್, ಹಲಾಲ್ ಆಜಾನ್ ವಿವಾದದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದೇವೆ.
ರಾಜ್ಯದಲ್ಲಿ ದಕ್ಷ, ಜನಪರ ಆಡಳಿತ ನೀಡುತ್ತಿದ್ದೇವೆ. ಅಜಾನ್ ವಿಚಾರವಾಗಿಯೂ ನಾವು ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಬಗೆಹರಿಸಿದ್ದೇವೆ. ಜನಪರ ಹಾಗೂ,ದಕ್ಷ ಆಡಳಿತ ನೀಡ್ತಿದ್ದೇವೆ. ವಿರೋಧಿಗಳಿಗೆ ಅದೇ ನಮ್ಮ ಉತ್ತರ ಎಂದು ತಿಳಿಸಿದ್ರು.
ಇದನ್ನೂ ಓದಿ : – ಜಿಟಿ ದೇವೇಗೌಡ ಮೊಮ್ಮಗಳು ಅನಾರೋಗ್ಯದಿಂದ ವಿಧಿವಶ