ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK SHIVKUMAR) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಡಿಯಿಂದ ಆರೋಪ ಪಟ್ಟಿ ದಾಖಲಾದ ಬೆನ್ನಲ್ಲೇ, 2018 ರಲ್ಲಿ ಡಿಕೆಶಿ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯ ಡಿಕೆ ಶಿವಕುಮಾರ್ ಮತ್ತಿತರರಿಗೆ ಸಮನ್ಸ್ ನೀಡಿದೆ.
ಜುಲೈ 1 ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ವಿಕಾಸ್ ಧುಲೆ ಡಿಕೆ ಶಿವಕುಮಾರ್ ಅವರಿಗೆ ನಿರ್ದೇಶಿಸಿದ್ದಾರೆ. ಡಿಕೆ ಶಿವಕುಮಾರ್ ಮತ್ತಿತರರ ವಿರುದ್ಧ ವಿಶೇಷ ಪ್ರಾಸಿಕ್ಯೂಟರ್ ನಿತೇಶ್ ರಾಣಾ ಅವರ ಮೂಲಕ ಇಡಿ ಸಲ್ಲಿಸಿದ ಜಾರ್ಜ್ ಶೀಟ್ ನ್ನು ಪರಿಗಣಿಸಿದ ನಂತರ ಕೋರ್ಟ್ ಈ ಆದೇಶ ನೀಡಿದೆ. ಇದನ್ನೂ ಓದಿ : – ಹ್ಯೂಬ್ಲೊಟ್ ವಾಚ್ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ? ಸಿದ್ದುಗೆ ಪ್ರಶ್ನೆ ಮಾಡಿದ ಬಿಜೆಪಿ
ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಈ ಹಿಂದೆ 2019, ಸೆಪ್ಟೆಂಬರ್ ನಲ್ಲಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿತ್ತು. ನಂತರ 2019, ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಸಾವಿರಾರು ಕೋಟಿ ರೂಪಾಯಿ ಮೊತ್ತದ ಹವಾಲಾ ವ್ಯವಹಾರ ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವೊಂದರಲ್ಲಿ ಕಳೆದ ವರ್ಷ ತೆರಿಗೆ ಇಲಾಖೆ ಡಿಕೆ ಶಿವಕುಮಾರ್ ವಿರುದ್ಧ ದಾಖಲಿಸಿದ್ದ ಜಾರ್ಜ್ ಶೀಟ್ ಈ ಕೇಸ್ ಆಧರಿಸಿದೆ.
ಇದನ್ನೂ ಓದಿ : – ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿನಾಡು ಎಂದು ಬೇರ್ಪಡಿಸ್ತಿದ್ದಾರೆ – ಅಣ್ಣಾಮಲೈ