ಸಿದ್ದರಾಮಯ್ಯ ವಿರುದ್ಧ ಕೃಷಿ ಸಚಿವ ಬಿ ಸಿ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿರೇಕೇರೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಬಿ.ಸಿ ಪಾಟೀಲ್ ಆರ್ ಎಸ್ ಎಸ್ ವಿರುದ್ದ ಸಿದ್ದರಾಮಯ್ಯ ಸರಣಿ ಟ್ವೀಟ್ ಕುರಿತಂತೆ ಕಿಡಿಕಾರಿದ್ದಾರೆ.
ಈ ದೇಶದಲ್ಲಿ ಆರ್ ಎಸ್ ಎಸ್ ಇಲ್ಲದೇ ಹೋಗಿದ್ದರೆ ಭಾರತ ದೇಶ ಇಷ್ಟೊತ್ತಿಗೆ ತಾಲಿಬಾನ್ ಆಗಿರ್ತಾ ಇತ್ತು. ಸಿದ್ದರಾಮಯ್ಯ ಬಹಳ ಬುದ್ದಿವಂತರು, ಅವರಿಗೆ ಬಹಳ ವಿಶಾಲವಾದ ಹೃದಯ ಇದೆ ಅಂತ ನಾನು ಅನ್ಕೊಂಡಿದ್ದೆ. ಸಿದ್ದರಾಮಯ್ಯ ಅವರ ಸುತ್ತ – ಮುತ್ತ ಇರೋರು ಅಷ್ಟೆ ಹಿಂದುಳಿದವರು , ದಲಿತರು ಅಂತ ಅನ್ಕೊಂಡಿದ್ದಾರೆ. ಯಾವ ಒಂದು ಜಾತಿ, ಕೋಮಿಗೆ ಆರ್ ಎಸ್ ಎಸ್ ಸೀಮಿತ ಆಗಿದೆ ಅನ್ನೋದನ್ನ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ. ದಲಿತರಿಗೆ ಹಿಂದುಳಿದದವರಿಗೆ ಆರ್ ಎಸ್ ಎಸ್ ನಲ್ಲಿ ಅವಕಾಶ ಇಲ್ಲ ಅನ್ನೋದಾದರೆ ಈ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯಾವ ಜಾತಿ?ಅವರು ಆರ್ ಎಸ್ ಎಸ್ ಅಲ್ವಾ? ಈ ದೇಶದ ಪ್ರಧಾನಿ ನರೇಂದ್ರ ಮೋದಿ ಯಾವ ಜಾತಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ : – ಬಸವಣ್ಣನವರ ಪಠ್ಯ ಕೈಬಿಟ್ಟಿಲ್ಲ – ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ
ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಅಷ್ಟು ಕಾಳಜಿ ಇದ್ರೆ , ಖರ್ಗೆಯವರು ಬಹಳ ಸೀನಿಯರ್ ಇದ್ರು.ಖರ್ಗೆಯವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡಬಹುದಿತ್ತು. ಯಾಕೆ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿಲ್ಲ? ಎಂದು ಪ್ರಶ್ನಿಸಿದ್ರು. ತಮ್ಮ ಸುತ್ತ ಮುತ್ತಲಿನ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳೋಕೆ ಸುಮ್ಮನೆ ಆರ್ ಎಸ್ ಎಸ್, ಆರ್ ಎಸ್ ಎಸ್ ಅಂತ ಹೇಳ್ತಾರೆ. ಆರ್ ಎಸ್ ಎಸ್ ಬಗ್ಗೆ ಟ್ವೀಟ್ ಮಾಡಿದರೆ ಈ ದೇಶದ ಮುಸ್ಲಿಮರು ನನ್ನ ಜೊತೆ ಬರ್ತಾರೆ ಅನ್ನೋ ಹುಚ್ಚು ಭಾವನೆ ಸಿದ್ದರಾಮಯ್ಯ ಅವರಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : – ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ – ಇತಿಹಾಸವನ್ನು ಯಾರೂ ತಿದ್ದಬಾರದು – ಯದುವೀರ್ ಒಡೆಯರ್ ಪ್ರತಿಕ್ರಿಯೆ