ನಾನು ಗೃಹ ಇಲಾಖೆಯಲ್ಲಿ ಈಗ ಎಕ್ಸ್ ಪರ್ಟ್ ಆಗಿದ್ದೇನೆ. ನನಗೆ ಈ ಖಾತೆ ಸಾಕು ಅನ್ನಿಸಿಲ್ಲ. ನಿಮಗೆ ಸಾಕು ಅನ್ನಿಸುತ್ತಾ ಹೇಳಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ರು. ಈ ಮೂಲಕ ಆರಗ ಗೃಹ ಸಚಿವ ಸ್ಥಾನ ಕೈ ತಪ್ಪೋ ಸುಳಿವು ನೀಡಿದ್ದಾರೆ. ಧ್ವನಿವರ್ಧಕ ಬಳಕೆ ಕುರಿತು ಸರ್ಕಾರದ ನಿಯಮಗಳನ್ನು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಧ್ವನಿ ವರ್ಧಕಗಳ ಬಳಕೆಗೆ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಅವಕಾಶ ಕೊಡಲಾಗಿದೆ. ಆದರೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ಅವಕಾಶ ಇರೋದಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ತೇವೆ. ಇನ್ನೂ ಧ್ವನಿ ವರ್ಧಕ ಬಳಕೆಗೆ ಅನುಮತಿ ಪಡೆಯವದವರು ಕೂಡಲೇ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – PSI ಹುದ್ದೆ ಕೊಡಿಸುವುದಾಗಿ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಕಿರಾತಕನ ಬಂಧನ
ಪಿಎಸ್ಐ ಅಕ್ರಮದ ಕುರಿತ ತನಿಖೆ ವಿಚಾರವಾಗು ಮಾತನಾಡಿದ ಅವರು ಪೊಲೀಸ್ ನೇಮಕಾತಿ ಹಗರಣ ಸಂಬಂಧ ಎಲ್ಲ ರೀತಿಯ ತನಿಖೆ ನಡೆಯುತ್ತಿದೆ. ವಿತ್ ಎವಿಡೆನ್ಸ್ ಎಲ್ಲರನ್ನೂ ಹಿಡಿಯುತ್ತಿದ್ದಾರೆ. ಕಿಂಗ್ ಪಿನ್ ಅನ್ನ ಈಗಾಗಲೇ ಹಿಡಿದಿದ್ದಾರೆ. ಪಕ್ಷ, ಪಂಗಡಕ್ಕಿಂತ ಯಾರೇ ತಪ್ಪು ಮಾಡಿದ್ರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ತೀವಿ. ಕಾಂಗ್ರೆಸ್ ನ ಇಬ್ಬರು ಕಿಂಗ್ ಪಿನ್ ಗಳನ್ನು ಹಿಡಿದಿದ್ದೇವೆ. ಈ ಪ್ರಕರಣದಲ್ಲಿ ರಾಜ್ಯಾದ್ಯಂತ ಅವರೇ ಹೆಚ್ಚಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಇದನ್ನೂ ಓದಿ : – ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾ ಹು ಅಕ್ಬರ್ ವಿದ್ಯಾರ್ಥಿನಿ