ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೂ ಶಿಕ್ಷಣ ಇಲಾಖೆಯಲ್ಲಿ ನಡೆಯೋದಕ್ಕು ವ್ಯತ್ಯಾಸ ಇದೆ – ಬಸವರಾಜ್ ರಾಯರೆಡ್ಡಿ

ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಂಟ್ರಾಕ್ಟ್ ಅಸೋಸಿಯೇಷನ್ ಪ್ರಧಾನಿಗೆ ಪತ್ರ ಬರೆದಿದೆ. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ತೂಗುತ್ತಿದೆ. ಆದರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೂ ಶಿಕ್ಷಣ ಇಲಾಖೆಯಲ್ಲಿ ನಡೆಯೋದಕ್ಕು ವ್ಯತ್ಯಾಸ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಂದಿನ ಸರ್ಕಾರ sc/st ವಿಧ್ಯಾರ್ಥಿಗಳಿಗೆ 2016-17,17-18 ಸಾಲಿನಲ್ಲಿ ಉಚಿತ ಲ್ಯಾಪ್ ಟಾಪ್ ನೀಡಿತ್ತು. ಇದು ಮುಂದುವರೆದು ಸ್ವಲ್ಪ ಪ್ರಮಾಣದ ಬೆಂಗಳೂರು ನಗರ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕೂಡ ವಿತರಣೆ ಮಾಡಲಾಗಿತ್ತು. ಉಳಿದಂತೆ ಎಲ್ಲಾ ವಿಧ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ನೀಡಲು ಟೆಂಡರ್ ಕರೆಯಲಾಗಿತ್ತು. ಆದರೆ ವಿಧಾನ ಪರಿಷತ್ ನಲ್ಲಿ ಆಪಾದನೆಗಳು ಬಂದಿತ್ತು. ಇದನ್ನೂ ಓದಿ : –  ನಾನು ಗೃಹ ಇಲಾಖೆಯಲ್ಲಿ ಈಗ ಎಕ್ಸ್ ಪರ್ಟ್ ಆಗಿದ್ದೇನೆ – ಸಚಿವ ಸ್ಥಾನ ಕೈ ತಪ್ಪೋ ಸುಳಿವು ನೀಡಿದ ಆರಗ ಜ್ಞಾನೇಂದ್ರ

Bharatiya Janata Party News & Results: Puducherry Assembly Election Result  2021, BJP Latest News

ಈಗ ಪ್ರಥಮ ವರ್ಷದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ನೀಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದಿದ್ದೇ ವಾಮಮಾರ್ಗದಿಂದ. ಅದನ್ನ ಮುಂದುವರೆಸಿಕೊಂಡು ಹೋಗ್ತಿದೆ. ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರವಾಗಿದೆ. ಸಾವಿರಾರು ಕೋಟಿ ಹಗರಣ ನಡೆದಿವೆ. ಹೇಳುವುದು ನೀತಿ ಮಾಡುವುದು ಬದನೆಕಾಯಿ. ಬಿಲ್ಡಿಂಗ್ ಬಿದ್ದರೆ ಮತ್ತೆ ಕಟ್ಟಬಹುದು.

Have To Live Together": BJP's BS Yediyurappa On Communal Flare-Ups

ರಸ್ತೆ ಹಾಳಾದರೆ ಅದನ್ನ ಸರಿಪಡಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ಹಾಗೆ ಸರಿಪಡಿಸಲಾಗಲ್ಲ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ. ಈಗ ಲ್ಯಾಪ್ ಟಾಪ್ ಖರೀದಿಯಲ್ಲೂ ಅವ್ಯವಹಾರ. ನಾವು ಹಿಂದೆ ೮೦೦೦ ಲ್ಯಾಪ್ ಟಾಪ್ ಕೊಟ್ಟಿದ್ದೆವು. ಎಸ್ಸಿ,ಎಸ್ಟಿ ತಾಂತ್ರಿಕ ವಿದ್ಯಾರ್ಥಿಗಳಿಗೆ ನೀಡಿದ್ದೇವು ಎಂದು ಸರ್ಕಾರದ ವಿರುದ್ಧ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : – PSI ಹುದ್ದೆ ಕೊಡಿಸುವುದಾಗಿ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಕಿರಾತಕನ ಬಂಧನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!