ರಾಜ್ಯದಲ್ಲಿ ಅಕ್ಷರಸ್ಥರ ಸಂಖ್ಯೆಹೆಚ್ಚಾಗಲು ಮಠಗಳು ಪ್ರಮುಖ ಕಾರಣ. ಮಠಗಳು ನಾಡಿನ ಕಲ್ಯಾಣಕ್ಕಾಗಿ ಹೆಚ್ಚು ಶ್ರಮಿಸಿವೆ ಎಂದು ಚಾಮರಾಜನಗರದ ವಿರಕ್ತಮಠದಲ್ಲಿ ಸತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಹೇಳಿದ್ದಾರೆ.
ಶ್ರೀ ಸಿದ್ದಮಲ್ಲೇಶ್ವರ ವಿರಕ್ತಮಠದ ಅನುಭವ ಮಂಟಪದಲ್ಲಿ ವಿಶ್ವಗುರು ಬಸವೇಶ್ವರ ಪುತ್ಥಳಿ ಅನಾವರಣದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅಕ್ಷರಸ್ಥರ ಸಂಖ್ಯೆಯನ್ನು ಹೊಂದಿದ್ದರೆ ಅದು ಮಠಗಳ ಕೊಡುಗೆ. ಮಠಗಳು ಶಿಕ್ಷಣ, ಧಾರ್ಮಿಕ ಪ್ರಜ್ಞೆ, ಶ್ರದ್ದೆ ಮೂಡಿಸುವಲ್ಲಿ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಮಠಗಳು ಮುಂಚೂಣಿಯಲ್ಲಿ ಶ್ರಮಿಸುತ್ತಿವೆ. ಇದನ್ನೂ ಓದಿ :- ಟಿಕೆಟ್ ಫೈನಲ್ ಆಗದೆ ಪ್ರಚಾರ ಕಚೇರಿಗೆ ಬರ್ತಿವಾ? – ಬಸವರಾಜ್ ಹೊರಟ್ಟಿ
ದೇಶದ ಸ್ವತಂತ್ರ ಸಂಗ್ರಾಮದಲ್ಲಿ ತೊಡಗಿಸಿಕೊಂಡವರಿಗೆ ಆಶ್ರಯ ಮತ್ತು ರಕ್ಷಣೆಯನ್ನು ನೀಡುವಲ್ಲಿ ಮಠಗಳು ಪ್ರಮುಖ ಪಾತ್ರವಹಿಸಿವೆ. ಚಾಮರಾಜನಗರ ವಿಶೇಷವಾಗಿ ವೃತ್ತಿ ಪರಂಪರೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿನ ಜನರು ಮಠ – ಮಾನ್ಯಗಳ ಶ್ರೇಯೋಭಿವೃದ್ದಿಗೆ ಅಪಾರವಾಗಿ ಕಾಣಿಕೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ್ರು.
ಇದನ್ನೂ ಓದಿ :- ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ – ಅರವಿಂದ ಬೆಲ್ಲದ್