ಪ್ರೀತಿಸಿದ ಹುಡಗನನ್ನೆ ಕೈ ಹಿಡಿಯಬೇಕು ಎಂದು ನಿರ್ಧರಿಸಿದ್ದ ಯುವತಿ, ಪೋಷಕರ ಒತ್ತಾಯದಿಂದ ಬೇರೆ ಯುವಕನ ಜೊತೆ ಹಸೆಮಣೆ ಏರಿ ಇನ್ನೇನೂ ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಮೆಗಾ ಡ್ರಾಮಾ ಮಾಡಿದ್ದಾಳೆ.
ಆ ಡ್ರಾಮಾದ ಅಸಲಿಯತ್ತು ತಿಳಿದು ವರನ ಕಡೆಯವರು ಫುಲ್ ಗರಂ ಆಗಿ ಗದ್ದಲ ನಡೆಸಿದ ಘಟನೆ ಮೈಸೂರಲ್ಲಿ ನಡೆದಿದೆ. ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿಯ ಯುವತಿ, ಹೆಚ್.ಡಿ.ಕೋಟೆಯ ಯುವಕನ ಜೊತೆ ಮದುವೆ ನಡೆಯಬೇಕಿತ್ತು. ನಿನ್ನೆ ಸಂಜೆ ರಿಸೆಪ್ಷನ್ ಕೂಡ ನಡೆದಿತ್ತು. ವಧು, ವರ ಎರಡು ಕಡೆಯ ಅಪಾರ ಬಂಧುಗಳು ಮದುವೆಗೆ ಬಂದಿದ್ದರು. ಇವತ್ತು ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ತಾಳಿ ಕಟ್ಟುವ ಕ್ಷಣವೂ ಬಂದು ಬಿಡ್ತು.
ಆಗಲೇ ವಧುವಿನ ಡ್ರಾಮಾ ಶುರುವಾಯ್ತು. ತಾಳಿಗೆ ಕೊರಳೊಡ್ಡುವ ಕ್ಷಣದಲ್ಲೇ ಯುವತಿ ಕುಸಿದು ಬಿದ್ದಿದ್ದಾಳೆ. ಆಗ ಯುವತಿ ವಿಚಾರಿಸಿದ್ದಾಗ ಪ್ರೀತಿಯ ವಿಚಾರ ಹೇಳಿದ್ದಾಳೆ. ನಾನು ಪ್ರೀತಿಸಿದ ಯುವಕನನ್ನೆ ಮದುವೆಯಾಗುತ್ತೇನೆಂದು ಯುವತಿ ಹೇಳಿದಾಗ ವರನ ಕಡೆಯವರಿಗೆ ಶಾಕ್ ಆಗಿದೆ. ಕೆಲ ದಿನಗಳ ಹಿಂದೆಯೇ ಯುವತಿ ಪ್ರಿಯಕರ ಆಕೆ ಮದುವೆಯಾಗುತ್ತಿದ್ದ ಯುವಕನಿಗೆ ಮೆಸೇಜ್ ಕಳಿಸಿ ಮದುವೆ ಆಗಬೇಡ. ಇದನ್ನೂ ಓದಿ :- ರಾಜ್ಯದಲ್ಲಿ ಅಕ್ಷರಸ್ಥರ ಸಂಖ್ಯೆಯನ್ನು ಹೊಂದಿದ್ದರೆ ಅದು ಮಠಗಳ ಕೊಡುಗೆ – ದೇಶಿಕೇಂದ್ರ ಸ್ವಾಮೀಜಿ
ಆಕೆ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದ. ಆದರೆ ವರ ಇದನ್ನು ನಿರ್ಲಕ್ಷಿಸಿ ಮದುವೆಗೆ ಮುಂದಾಗಿದ್ದ. ಯಾವಾಗ ಮೆಸೇಜ್ಗೂ ವರ ಬಗ್ಗದಿದ್ದಾಗ ಯುವತಿಯೇ ಕೊನೆ ಕ್ಷಣದಲ್ಲಿ ಈ ಹೈಡ್ರಾಮಾ ಮಾಡಿ ಮದುವೆಯಿಂದ ತಪ್ಪಿಸಿಕೊಂಡಿದ್ದಾಳೆ. ವಿಚಾರ ತಿಳಿಯುತ್ತಲೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ವಧುವಿನ ಪೋಷಕರಿಗೆ ಛೀಮಾರಿ ಹಾಕಿದ್ದಾರೆ. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದು, ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ವೆಚ್ಚ ಮಾಡಲಾಗಿದೆ.
ಎಲ್ಲಾ ಖರ್ಚು ಕಟ್ಟಿಕೊಡಿ ಎಂದು ವರನ ಕುಟುಂಬ ಗಲಾಟೆ ಮಾಡಿದ್ದಾರೆ. ನಂತರ ವಧು-ವರರ ಪೋಷಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುಗೆ ನೀಡಿದ ಆಭರಣವನ್ನು ವರನ ಪೋಷಕರು ವಾಪಸ್ ಪಡೆದರು. ವಧುವಿನ ಪೋಷಕರು ಠಾಣೆಯಲ್ಲೇ ನಷ್ಟ ಭರಿಸಿಕೊಟ್ಟರು. ಖರ್ಚು ಮಾಡಿದ ಹಣ ವಾಪಸ್ ಪಡೆದು ಹೆಚ್.ಡಿ.ಕೋಟೆಗೆ ವರನ ಕುಟುಂಬದವರು ತೆರಳಿದರು. ಹುಡುಗಿ ಕೂಡ ಪೋಷಕರ ಜೊತೆ ಆಟೋದಲ್ಲಿ ಮನೆಗೆ ವಾಪಸ್ ಆದಳು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ :- ಟಿಕೆಟ್ ಫೈನಲ್ ಆಗದೆ ಪ್ರಚಾರ ಕಚೇರಿಗೆ ಬರ್ತಿವಾ? – ಬಸವರಾಜ್ ಹೊರಟ್ಟಿ