ಜಮ್ಮು-ಶ್ರೀನಗರ ( Jammu – srinagar ) ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದಿದೆ. ಪರಿಣಾಮ 5 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಹಲವು ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ಮೂರು ಮೃತದೇಹಗಳನ್ನ ಗುರುತಿಸಲಾಗಿದೆ. ಮೂವರು ಪಶ್ಚಿಮಬಂಗಾಳದವರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಹತ್ವಾಕಾಂಕ್ಷೆಯ ಚತುಷ್ಪಥದ ಅತ್ಯಂತ ಕ್ಲಿಷ್ಟಕರ ರಸ್ತೆಯ ಬನಿಹಾಲ್-ರಾಂಬನ್ ವಿಭಾಗದಲ್ಲಿ ಬಹು ಸುರಂಗಗಳನ್ನು ನಿರ್ಮಿಸಲಾಗುತ್ತಿತ್ತು. ಇದೇ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಸುಮಾರು 10 ಕಾರ್ಮಿಕ ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಮೂವರನ್ನ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದೆ. ಈ ಸುರಂಗ ಕುಸಿತದ ವಿಡಿಯೋವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ : – ನಾಳೆ ಬೆಳ್ಳಗೆ ದಾವೋಸ್ ಗೆ ಸಿಎಂ ಬೊಮ್ಮಾಯಿ ಪ್ರಯಾಣ