ಧಾರವಾಡದಲ್ಲಿ (Dharwad) ಕರ್ನಾಟಕ ವಿವಿಗೆ ಮಾಜಿ ಸಿಎಂ ಕುಮಾರಸ್ವಾಮಿ (HD.Kumaraswamy) ಭೇಟಿ ನೀಡಿದರು .ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ ಮಾಡಿದರು .
ಕಳೆದ ೬ ದಿನಗಳಿಂದ ಅತಿಥಿ ಉಪನ್ಯಾಸಕರು ಧರಣಿ ಕುಳಿತಿದ್ದಾರೆ . ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಧರಣಿ ಮಾಡುತ್ತಿದ್ದಾರೆ . ಶಿಕ್ಷಕರ ಸಮಸ್ಯಗಳನ್ನ ಮಾಜಿ ಸಿಎಂ ಕುಮಾರಸ್ವಾಮಿ ಆಲಿಸಿದರು .ಇನ್ನೊಂದೆಡೆ ಎಚ್ಡಿಕೆ ಕಾರ್ಗೆ ಪಿಎಸ್ಐ ಅಭ್ಯರ್ಥಿಗಳು ಘೇರಾವ್ ಹಾಕಲು ಯತ್ನಿಸಿದ್ರು. ಪಿಎಸ್ಐ ನೇಮಕಾತಿ ವಂಚಿತ ಅಭ್ಯರ್ಥಿಗಳಿಂದ ಘೇರಾವ್ ಯತ್ನಿಸಿದ್ರು.ಕರ್ನಾಟಕ ವಿವಿಗೆ ಬಂದಿದ್ದ ಎಚ್ಡಿಕೆ ಜೊತೆ ವಾಗ್ವಾದ ನಡೆಸಿದ್ರು. ಈ ಹಿನ್ನೆಲೆಯಲ್ಲಿ ವಾಪಸ್ ಹೋಗುವಾಗ ಘೇರಾವ್ ಯತ್ನ ನಡೆಸಿದ್ರು. ಇದೇ ವೇಳೆ ಅಭ್ಯರ್ಥಿಗಳುಎಚ್ಡಿಕೆ ವಾಹನ ಬೆನ್ನತ್ತಿದ್ರು. ಪ್ರತಿಭಟನಕಾರರನ್ನು ತಡೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ : – ಜೆಡಿಎಸ್ ಪಕ್ಷವನ್ನು ಅವಮಾನಿಸಲಾಗಿದೆ- ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ